ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ
ಕಛೇರಿ, ಕಾರ್ಕಳ ವಲಯ ಮತ್ತು ಶ್ರೀಮದ್
ಭುವನೇಂದ್ರ ಶಾಲೆ ಕಾರ್ಕಳ ಇವರ
ಸಹಯೋಗದೊಂದಿಗೆ ನಡೆದ 2024-25ನೇ ಸಾಲಿನ ತಾಲೂಕು
ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ
ಆಂಗ್ಲಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯ 7ನೇ
ತರಗತಿ ವಿದ್ಯಾರ್ಥಿನಿ ಸಾನ್ವಿ ಎಸ್. ಕನ್ನಡ ಪ್ರಬಂಧ
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 10ನೇ ತರಗತಿ
ವಿದ್ಯಾರ್ಥಿನಿ ಅಶ್ನಿ ಕೋಟ್ಯಾನ್ ಭರತನಾಟ್ಯದಲ್ಲಿ ಪ್ರಥಮ ಸ್ಥಾನ
ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
10ನೇ ತರಗತಿಯ ವಿದ್ಯಾರ್ಥಿನಿಯರಾದ ಹಸ್ನಾ ಜುಮಾನ್
ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ತೃತೀಯ , ಅನಘ
ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು 8ನೇ
ತರಗತಿಯ ಆರಾಧ್ಯ ಜನಪದ ಗೀತೆಯಲ್ಲಿ ದ್ವಿತೀಯ
ಸ್ಥಾನ ಗಳಿಸಿರುತ್ತಾರೆ.
ಇವರನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ
ಶೆಟ್ಟಿಯವರು ಅಭಿನಂದಿಸಿದ್ದಾರೆ.



















