27.5 C
Udupi
Friday, May 1, 2026
spot_img
spot_img
HomeBlogಇನ್ನಾ ವಿದ್ಯುತ್ ಟವರ್ ನಿರ್ಮಾಣ, ರೈತರ ಹೋರಾಟದಲ್ಲಿ ರಾಜಕೀಯದ ಬೇಳೆ ಬೇಯಿಸಿರುವ ಉದಯ ಶೆಟ್ಟಿ ನಡೆ...

ಇನ್ನಾ ವಿದ್ಯುತ್ ಟವರ್ ನಿರ್ಮಾಣ, ರೈತರ ಹೋರಾಟದಲ್ಲಿ ರಾಜಕೀಯದ ಬೇಳೆ ಬೇಯಿಸಿರುವ ಉದಯ ಶೆಟ್ಟಿ ನಡೆ ಖಂಡನೀಯ

ರಾಜ್ಯ ಸರಕಾರದ ಆದೇಶವಿಲ್ಲದೆ ಕಾಮಗಾರಿಯೇ…? ಕಾಂಗ್ರೆಸ್ ನಾಯಕನ ನಡೆಯ ಬಗ್ಗೆ ನವೀನ್ ನಾಯಕ್ ಆಕ್ರೋಶ

ಕಾರ್ಕಳ ಡಿ 04: ಇನ್ನಾ ಗ್ರಾಮದಲ್ಲಿ ವಿದ್ಯುತ್‌ ಟವರ್‌ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆ ಅಧಿಕಾರಿಗಳು ಯಾರಿಗೂ ಮಾಹಿತಿಯನ್ನು
ನೀಡದೇ, ಏಕಾಏಕಿ ಟವರ್‌ ನಿರ್ಮಾಣಕ್ಕೆ ಮುಂದಾಗಿರುವ ವಿಚಾರ ತಿಳಿದ ಕೂಡಲೆ ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ
ಕಾರ್ಯಕರ್ತರಾದ ನಾವೆಲ್ಲರೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದೊಂದಿಗೆ ಮಾತ್ರ ಸ್ಥಳಕ್ಕೆ ಭೇಟಿ ನೀಡಿ ರೈತರ
ಹೋರಾಟದೊಂದಿಗೆ ಭಾಗಿಯಾದೆವು. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಆದಂತಹ
ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವುದನ್ನು ಬಿಟ್ಟು, ನೇರವಾಗಿ ಒಂದು ಪಕ್ಷದ ಮೇಲೆ ಆರೋಪ ಹೊರಿಸಿರುವುದು ಅತ್ಯಂತ ಖಂಡನೀಯ ಎಂದು ನವೀನ್ ನಾಯಕ್ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕಾಮಗಾರಿಯು ಯಾವ ಪಕ್ಷದ ಆಡಳಿತ ಸಂದರ್ಭದಲ್ಲಿಯೇ ಆಗಿರಲಿ, ಅಥವಾ ಕೇಂದ್ರ/ರಾಜ್ಯ ಯಾವುದೇ ಸರ್ಕಾರ ನಡೆಸಿರಲಿ,
ಇದರಿಂದ ರೈತರಿಗೆ ಸಮಸ್ಯೆ ಆದಲ್ಲಿ ಅದನ್ನು ಪಕ್ಷಾತೀತವಾಗಿ ಖಂಡಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಇದಕ್ಕಾಗಿ
ಪಕ್ಷಾತೀತವಾಗಿ ಹೋರಾಟ ಮಾಡುವ ಅನಿವಾರ್ಯವಿದೆ. ಆದರೆ ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ತನ್ನ ರಾಜಕೀಯ ಬೇಳೆ
ಬೇಯಿಸುವುದರಲ್ಲಿ ನಿರತರಾದಂತಹ ಕಾಂಗ್ರೆಸ್‌ ನಾಯಕರ ಈ ನಡೆ, ಅಲ್ಲಿರುವ ರೈತರಿಗೂ ಇರಿಸುಮುರಿಸು ಆಗಿರುವುದು ನಮ್ಮ ಗಮನಕ್ಕೆ
ಬಂದಿರುತ್ತದೆ. ಈ ಹಿಂದೆಯೂ ಪ್ರತಿಭಟನೆಯಾದ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಆಗಮಿಸಿ, ರೈತರ
ವಿಶ್ವಾಸವನ್ನು ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂಬ ಭರವಸೆಯ ಮಾತನ್ನು ಹೇಳಿರುತ್ತಾರೆ. ಆದರೆ ಇಂದು
ನೇರವಾಗಿ ಈಗಿನ ಇಂಧನ ಸಚಿವರಾದ ಕೆಜೆ ಜಾರ್ಜ್‌ರವರ ಆದೇಶದ ಮೇರೆಗೆ ಈ ಕಾಮಗಾರಿ ಆರಂಭವಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಈ
ತರಹ ರಾಜಕೀಯ ಬೇಳೆ ಬೇಯಿಸಿಕೊಂಡರೆ ಇದರಿಂದ ಲಾಭ ಪಡೆಯುವುದು ಬಂಡವಾಳಶಾಹಿಗಳು, ದ್ರೋಹಕ್ಕೆ ಒಳಗಾಗುವುದು ಮಾತ್ರ ಬಡ ರೈತರು
ಎಂಬುವುದನ್ನು ನಾವು ಮನಗಾಣಬೇಕು.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗುವುದನ್ನು ಮನಗಂಡು ಕಾರ್ಕಳ
ಶಾಸಕರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ಸರ್ಕಾರದಲ್ಲಿ ಒತ್ತಡ ಹೇರುವ ಮೂಲಕ ಕಾಮಗಾರಿ ನಡೆಯದಂತೆ ತಡೆಹಿಡಿದಿದ್ದರು. ಪ್ರಸ್ತುತ
ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆ. ಮಾನ್ಯ ಉದಯ್‌ ಕುಮಾರ್‌ ಶೆಟ್ಟಿಯವರೇ, ನಿಮ್ಮದೇ ಸರ್ಕಾರವಿದೆ. ಆದರೆ ಏಕಾಏಕಿ ಯಾರಿಗೂ
ಮಾಹಿತಿ ನೀಡದೇ ಕಾಮಗಾರಿ ಏಕೆ ಆರಂಭವಾಯಿತು? ನಿಮ್ಮ ಪಕ್ಷದಲ್ಲಿ ಅಧಿಕಾರವಿದೆ. ನಿಮ್ಮ ಸಚಿವರಿಗೆ, ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳಿಗೆ
ಒತ್ತಡ ಹೇರಿ ಕಾಮಗಾರಿ ನಿಲ್ಲಿಸಬಹುದಿತ್ತಲ್ಲವೇ? ಅದನ್ನು ಬಿಟ್ಟು ಸ್ಥಳಕ್ಕೆ ಬಂದು ರೈತರ ಹೋರಾಟದಲ್ಲಿ ರಾಜಕೀಯ ಬೆರೆಸುವುದು ಎಷ್ಟು
ಸರಿ? ನಿಮಗೆ ನಿಮ್ಮ ಪಕ್ಷದಲ್ಲಿ ಅಸ್ಥಿತ್ವ ಇಲ್ಲವೇ?
ಭಾರತೀಯ ಜನತಾ ಪಾರ್ಟಿಯ ನಾಯಕರಾದ ನಮಗೆ ರೈತರ ಹೋರಾಟದಲ್ಲಿ ಯಾವುದೇ ರಾಜಕೀಯ ಮಾಡಲು ಆಸಕ್ತಿಯಿಲ್ಲ. ನಮ್ಮ
ಹೋರಾಟ ಏನಿದ್ದರೂ ರೈತರ ಪರ, ಜನಪರ ಅಷ್ಟೇ. ಇಂತಹ ವಿಚಾರದಲ್ಲಿ ರಾಜಕೀಯ ಪಕ್ಷ ಯಾವುದೇ ಇರಲಿ, ರಾಜಕೀಯ ಮಾಡಲು ಹೊರಟರೆ
ತೊಂದರೆಗೆ ಒಳಗಾಗುವುದು ಸಾಮಾನ್ಯ, ಬಡ ರೈತರು. ರೈತರನ್ನು ಬಲಿಕೊಟ್ಟು ರಾಜಕೀಯ ಮಾಡುವುದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ
ತರುವಂತದ್ದಲ್ಲ. ಇಂತಹ ವಿಚಾರದಲ್ಲಿ ನಿಮ್ಮ ಚಿಲ್ಲರೆ ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಹೋರಾಟ ಮಾಡೋಣ. ಮುಂದಿನ ದಿನಗಳಲ್ಲಿ
ರೈತರಿಗೆ ಈ ವಿಚಾರದಲ್ಲಿ ನ್ಯಾಯ ಒದಗದಿದ್ದಲ್ಲಿ ಭಾರತೀಯ ಜನತಾ ಪಾರ್ಟಿ ರೈತರೊಂದಿಗೆ ಇದ್ದು, ಯಾವ ರೀತಿಯ ಹೋರಾಟಕ್ಕೂ ಸಿದ್ಧವಿದೆ
ಎಂದು ಈ ಮೂಲಕ ತಿಳಿಯಪಡಿಸುತ್ತೇವೆ. ಏನೇ ಇರಲಿ, ರೈತರಿಗೆ ನ್ಯಾಯ ಸಿಗಲಿ ಎಂಬುದು ಕಾರ್ಕಳ ಭಾರತೀಯ ಜನತಾ ಪಾರ್ಟಿಯ ಆಶಯ ಭಾರತೀಯ ಜನತಾ ಪಾರ್ಟಿ ಕಾರ್ಕಳಮಂಡಲದ ಕ್ಷೇತ್ರಾಧ್ಯಕ್ಷರಾದ
ನವೀನ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page