ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಕ್ಕೆ “ಕರುನಾಡ ಸಿರಿ ಪ್ರಶಸ್ತಿ”

ಶಾಲೆಯೊಂದು ತೆರೆದರೆ ಊರೊಂದು ಸುಸಂಸ್ಕೃತ ಗೊಂಡಂತೆ ಎಂಬ ಮಾತಿನಂತೆ ತಮ್ಮ ಶಾಲೆಯು ಸಾರ್ಥಕ ನೂರು ಸಂವತ್ಸರವನ್ನು ಆಚರಿಸಿದ ಶತಮಾನೋತ್ಸವ ಶಾಲೆಯೆಂಬ ಶ್ರೇಷ್ಠ ಹೆಗ್ಗಳಿಕೆ ಈ ಶಾಲೆಗೆ ಸಂದಿದೆ. ಈ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೆ ಅದೆಷ್ಟೋ ವಿದ್ಯಾರ್ಥಿಗಳು ಬಡವರಿರಲಿ ಶ್ರೀಮಂತರಿರಲಿ ಕನ್ನಡ ಮಾತೃಭಾಷೆಯಲ್ಲಿ ಒಂದೇ ತಾಯ ಮಕ್ಕಳೆಂದು ವಿದ್ಯೆಯನ್ನು ಕಲಿತು ನಾಡಿಗೆ ದೇಶಕ್ಕೆ ಶ್ರೇಷ್ಠ ವ್ಯಕ್ತಿಗಳಾಗಿ ಮೂಡಿ ಬಂದಿರುತ್ತಾರೆ. ಒಂದು ಪುಟ್ಟ ಹಳ್ಳಿಯೆನಿಸಿದ ಕಲ್ಯಾ ಊರಿನಲ್ಲಿ ಅಂದು ಶಾಲೆಯ ಅವಶ್ಯಕತೆ ಇದ್ದಾಗ ಊರ ಹಿರಿಯ ಪ್ರಾಥಃಸ್ಮರಣೀಯ ಮಹನೀಯರು ಶುಭಸ್ಯಂ ಶೀಘ್ರಂ ಎಂದು ಭಾವಿಸಿ ತೆರೆದ ಶಾಲೆಯು ಇಂದು ಸಾಗಿ ಬಂದ ಹಾದಿಯ ಹೆಜ್ಜೆ ಗುರುತು ಆದರ್ಶವಾದುದು ಆನುಸರಣೀಯವಾದು.

ಇಂದು ಕೂಡ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದರ್ಶ ಶಾಲಾಭಿವೃದ್ಧಿ ಸಮಿತಿ ಶಾಲಾ ಪೂರ್ವ ವಿದ್ಯಾರ್ಥಿಗಳು ಉದಾರ ದಾನಿಗಳು ಆಭಿಮಾನದ ಪೋಷಕರು ನುರಿತ ಆದರ್ಶ ಶಿಕ್ಷಕ ಬಂಧುಗಳು ಅಃತೆಯೇ ದೇಶದ ಭಾವಿ ಪ್ರಜೆಗಳೆನಿಸಿದ ವಿದ್ಯಾರ್ಥಿ ವೃಂದ ಈ ಶಾಲೆಯ ಸೊಬಗಿಗೆ ದೊಡ್ಡ ಆಸ್ತಿಯೆನಿಸಿದೆ.
ಇತ್ತೀಚೆಗೆ ದೇಶದ ಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ರವರ ಸ್ಮಾರಕ ನಿರ್ಮಾಣಗೊಂಡು ಬಿಸಿರಕ್ತದ ಗಂಡುಗಲಿ ಸೈನಿಕನ ದೇಶಪ್ರೇಮ ಮತ್ತು ಬಲಿದಾನದ ಪಾವಿತ್ರ್ಯತೆಯನ್ನು ವಿದ್ಯಾರ್ಥಿಗಳಿಗೆ ಆದರ್ಶ ವೆಂದು ಕಲಿಸಿಕೊಟ್ಟಿದೆ.
ಹಾಗಾಗಿ ಶಾಲೆಯ ಶತ ವರ್ಷದ ಸಂಭ್ರಮ ಶಾಲೆಯ ಮೂಲಭೂತ ಸೌಕರ್ಯ ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಕನ್ನಡ ಮಾತೃಭಾಷಾ ಅಭಿಮಾನ ಕೈಗೊಂಡ ಕನ್ನಡ ನಾಡು ನುಡಿಯ ಕೈಕಂರ್ಯವನ್ನು ಪರಿಣಿಗಣಿಸಿ ಶಿಕ್ಷಣ ಪ್ರೇಮಿ ಡಾ ರವೀಂದ್ರ ಶೆಟ್ಟಿ ಬಜಗೋಳಿ ಇವರು ಪ್ರಾಯೋಜಿಸಿದ ಕರುನಾಡ ಸಿರಿ ಉತ್ತಮ ಶಾಲೆ ಪ್ರಶಸ್ತಿಯನ್ನು ಶಿರ್ಲಾಲಿನಲ್ಲಿ ನಡೆದ ಪ್ರೊ ಕೆ ಗುಣಪಾಲ ಕಂಡಬರ ಸಮ್ಮೇಳನ ಸರ್ವಧ್ಯಾಕ್ಷತೆಯಲ್ಲಿ ಸೇರಿದ ಸಮಸ್ತ ಕನ್ನಡ ಮನಸ್ಸುಗಳ ಉಪಸ್ಥಿತಿಯಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಾರ್ಕಳ ಪ್ರದಾನ ಮಾಡುತ್ತಿದೆ.
ಇನ್ನೂ ಮುಂದೆಯೂ ಈ ಶಾಲೆಯು ಒಂದು ಆದರ್ಶ ಶಾಲೆಯೆನಿಸಿ ವಿದ್ಯಾ ದಾಸೋಹವನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದು ಎಲ್ಲರಿಗೂ ಮಾದರಿಯಾಗಿ ಆದರ್ಶಶಾಲೆಯಾಗಿ ಎಲ್ಲರಿಗೂ ಮಾದರಿಯಾಗಿ ಮೂಡಿ ಬಂದಿದೆ.



















