
ಮಾಳ ಗ್ರಾಮದ ಹಿರಿಯ ಆಯುರ್ವೇದ ತಜ್ಞ ಡಾ ಸತ್ಯನಾರಾಯಣ ಭಟ್ ಇವರಿಗೆ ಇಂಡಿಕಾ 2024 ಪ್ರಶಸ್ತಿ ಲಭಿಸಿರುವುದು ಗ್ರಾಮಕ್ಕೆ ಹೆಮ್ಮೆಯ ವಿಚಾರ ಹೈದರಾಬಾದಿನಲ್ಲಿ 15 ವರ್ಷ ಮುಂಚೆ ಸ್ಥಾಪನೆಗೊಂಡ ಸಂಸ್ಥೆಯಾಗಿದ್ದು ಭಾರತದಾದ್ಯಂತ 93 ಮಂದಿ ಹಿರಿಯ ವಿದ್ವಾಂಸ ಗುರುಗಳನ್ನು ಈಗಾಗಲೇ ಗುರುತಿಸಿದ್ದು, ದೇಶೀಯ ವಿದ್ಯೆಯನ್ನು ಉಳಿಸಿ ಬೆಳೆಸಿದಂತ ಗುರುಗಳನ್ನು ಹುಡುಕಿಕೊಂಡು ಸದ್ರಿ ಸಂಸ್ಥೆಯ ವರಿಷ್ಠರು ಮಾಳ ಗ್ರಾಮಕ್ಕೆ ಭೇಟಿ ನೀಡಿ ಸ್ವಗೃಹ ತ್ರಿಭುವನ ಇಲ್ಲಿ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು.
ಶ್ರೀಯುತರು ಸಮಾಜಿಕ ಧಾರ್ಮಿಕ ಶೈಕ್ಷಣಿಕ ಎಲ್ಲಾ ಕ್ಷೇತ್ರದಲ್ಲೂ ಪ್ರೋತ್ಸಾಹ ನೀಡುತ್ತಾ ನಮ್ಮೂರಿಗೆ ಹಿರಿಯ ಉತ್ಸಾಹಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಇವರ ಮುಂದಿನ ಜೀವನದಲ್ಲೂ ಇನ್ನೂ ಅನೇಕ ಪ್ರಶಸ್ತಿ ಲಭಿಸುವಂತಾಗಲಿ ಎಂದು ಸುಧಿಷ್ ಶೆಟ್ಟಿ ಯವರು ಶುಭ ಹಾರೈಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













