ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಹಾಗೂ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ, ಕಾರ್ಕಳ

ಕಾರ್ಕಳ : ಜೂನ್ 14 ರಂದು ಕಾರ್ಕಳದ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಹಾಗೂ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದರು.
10ನೇ ತರಗತಿಯ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ಜವಾಬ್ದಾರಿ, ತಂಡದ ಸಹಕಾರ, ನಾಯಕತ್ವ ಹಾಗೂ ಸಮಾಜ ಸೇವೆಯ ಮೌಲ್ಯಗಳನ್ನು ಕಲಿತರು. ಶಿಕ್ಷಕರೂ ಸಹ ಶಿಬಿರದ ಯಶಸ್ಸಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದರು.
ಈ ಕಾರ್ಯಕ್ರಮವು ಸಮಾಜ ಸೇವೆಯ ಮಹತ್ವವನ್ನು ಅರಿಯುವಂತೆ ಮಾಡಿ, ಮಾನವೀಯತೆಯ ಸಂದೇಶವನ್ನು ಸಾರಿತು.
ನಮ್ಮ ಯುವ ಸ್ವಯಂ ಸೇವಕರು ತೋರಿದ ಉತ್ಸಾಹ ಮತ್ತು ಸೇವಾ ಮನೋಭಾವವು ಜವಾಬ್ದಾರಿಯುತ ಮನೋಭಾವ ಹೊಂದಿರುವ ಭವಿಷ್ಯದ ಜೀವಕ್ಷಕರನ್ನು ಪ್ರತಿಬಿಂಬಿಸಿತು.

































