ಸಮಾಜಮುಖಿ ಕಾರ್ಯದಿಂದ ಖ್ಯಾತಿಗಳಿಸಿದ ಸಂಸ್ಥೆಗೆ, 5ನೇ ವರ್ಷದ “ಸಂಭ್ರಮಾಚರಣೆ”
ಜು.1ರಂದು ಅದ್ದೂರಿ, ವಿಶೇಷ ಕಾರ್ಯಕ್ರಮ

ಕಾರ್ಕಳ: ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ (ಒಂದಿಷ್ಟು ಸಮಾಜಕ್ಕಾಗಿ) ತನ್ನ 5ನೇ ವರ್ಷದ ಸಂಭ್ರಮಾಚರಣೆಯನ್ನು ದೇವರ ಮಕ್ಕಳೊಂದಿಗೆ ಜುಲೈ 1ರಂದು ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರ ಕುಕ್ಕುಂದೂರಿನಲ್ಲಿ ಅದ್ದೂರಿಯಾಗಿ ಆಚರಿಸಲಿದೆ.
ಕಾರ್ಯಕ್ರಮದ ಅಂಗವಾಗಿ, ಬೆಳಗ್ಗೆ 11 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಆಯೋಜಿಸಿದ್ದು ಖ್ಯಾತ ಗಾಯಕ ಉಮೇಶ್ ಕೋಟಿಯನ್ ವಾಮದಪದವು ತಂಡದ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.





















































































