
ದಿನಾಂಕ 12: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ , ತೆಳ್ಳಾರು ಇಲ್ಲಿ ಜೇಸಿಐ ಕಾರ್ಕಳ ವತಿಯಿಂದ How To Face Exam ಇದರ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ತರಬೇತುದಾರರಾಗಿ ಜೆಸಿಐ ವಲಯ ತರಬೇತುದಾರರಾದ ಜೆಸಿ ಚಿತ್ತರಂಜನ್ ಶೆಟ್ಟಿಯವರು, ಮಕ್ಕಳು ಭವಿಷ್ಯದ ಮುಂದಿನ ಗುರಿಯನ್ನು ಇಟ್ಟುಕೊಂಡು ಪರೀಕ್ಷೆಯನ್ನು ಎದುರಿಸಬೇಕು . ಪರೀಕ್ಷೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಸಿದ್ದತೆಗಳನ್ನು ಯಾವ ರೀತಿ ಮಾಡುವುದು ಹಾಗೂ ಮಕ್ಕಳು ಯಾವ ರೀತಿ ಉನ್ನತ ಶ್ರೇಣಿಗೆ ಪ್ರಯತ್ನವನ್ನು ಪಡಬೇಕು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. ಪರೀಕ್ಷೆ ಬರೆಯುವುದು ಮಕ್ಕಳ ಕರ್ತವ್ಯ ಅವರನ್ನು ಹುರಿದುಂಬಿಸಿ ಪ್ರೋತ್ಸಾಹಿಸುವುದು ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ ಶಿಕ್ಷಕರ ಜೊತೆ ಮುಕ್ತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಇಂದಿನಿಂದ ಪರೀಕ್ಷೆಯ ದಿನದವರೆಗೆ ನಿಮ್ಮ ಗುರಿ ಅಚಲವಾಗಿರಲಿ ಎಂದು ಶುಭವನ್ನು ಹಾರೈಸಿದರು
ವೇದಿಕೆಯಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರು ಜೆಸಿ ಶ್ವೇತಾ ಎಸ್ ಜೈನ್, ಕೋಶಾಧಿಕಾರಿ ಜೇಸಿ ರೇವತಿ ಶೆಟ್ಟಿ ಹಾಗೂ ಶಾಲಾ ನಾಯಕ , ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶಾಲಾ ಶಿಕ್ಷಕರು, ಉಪಸ್ಥಿತರಿದ್ದರು. ಶಿಕ್ಷಕಿ ಪ್ರಣೀಳ ಇವರು ಸ್ವಾಗತಿಸಿ ಜೇಸಿಐ ಕಾರ್ಕಳದ ಅಧ್ಯಕ್ಷರು ಧನ್ಯವಾದವನ್ನು ನೆರವೇರಿಸಿದರು



















