
ಜೇಸಿಐ ಕಾರ್ಕಳ ವತಿಯಿಂದ ವರ್ಧಮಾನ ಶಿಕ್ಷಣ ಸಂಸ್ಥೆ ಸಾಣೂರು , ಇಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದರು .
ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ದಿಲೀಪ್ ಇವರು ಮಕ್ಕಳೊಂದಿಗೆ ಅತ್ಯುತ್ತಮ ವಿಚಾರಗಳನ್ನು ಚರ್ಚೆ ಮಾಡಿ, ಅವರೊಂದಿಗೆ ಮುಕ್ತವಾಗಿ ಮಾತನಾಡಿ, ಸಂವಹನ ಮಾಡಿ, ಅನೇಕ ವಿಚಾರಗಳ ಬಗ್ಗೆ ಮಾಹಿತಿ ಹಾಗೂ ಠಾಣೆಯ ಕಾರ್ಯ ವೈಖರಿಯ ಬಗ್ಗೆ ಮಕ್ಕಳಿಗೆ ವಿಶೇಷ ಮುತುವರ್ಜಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರು ಜೆಸಿ ಶ್ವೇತಾ ಎಸ್ ಜೈನ್ , ವರ್ಧಮಾನ ಶಾಲಾ ಸಂಚಾಲಕಿ ಶಶಿಕಲಾ ಕೆ ಹೆಗ್ಡೆ, ಸ್ಕೂಲ್ ಎಜುಕೇಶನ್ ಆಫೀಸರ್ ಹಾಗೂ ಸ್ಕೌಟ್ ಶಿಕ್ಷಕಿ ಕರ್ತವ್ಯ ಕೆ ಹೆಗ್ಡೆ, ಗೈಡ್ ಶಿಕ್ಷಕಿ ಪ್ರೀಯ ಹಾಗೂ ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು




















