
ಆರ್ ಪಿ ಸಿ ಅಕಾಡೆಮಿ ಆಯೋಜಿಸಿದ ಅಂತರ್ ಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ಪ್ರಧ್ಯೋತ್ ಹಾಗೂ ಏಳನೇ ತರಗತಿಯ ಲಿಖಿತ್ “ಮ್ಯಾನ್ ಆಫ್ ದ ಮ್ಯಾಚ್” ಬಹುಮಾನವನ್ನು ಹಾಗೂ ಐದನೇ ತರಗತಿಯ ಸಿಯಾ ಶೆಟ್ಟಿ ಇವರು ಬಾಲಕಿಯ ಕ್ರಿಕೆಟ್ ಕ್ರೀಡಾಪಟು ಎಂದು ಗೌರವಿಸಲ್ಪಟ್ಟಿದ್ದಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.



















