ಕಥೆ (ಭಾಗ- 25)
ಚೇತನ್ ವರ್ಕಾಡಿ

ಹೌದು ಮಂಗಳಳ ಮುದ್ದಿನ ಸ್ವರ ಅದು.ಮಿಥುನ್ಗೆ ಮಂಗಳಳನ್ನೇ ನೋಡಿದ ಆ ದಿನದ ನೆನಪುಗಳು ಮತ್ತೆ ಮರುಕಳಿಸಿತು.ಒಂದು ಕ್ಷಣ ಮೌನಿಯಾಗಿ ಮುದ್ದು ಸ್ವರವನ್ನೇ ಆಲಿಸಿದ.ಮತ್ತೆ ಮಾತು ಮುಂದುವರಿಸಿ ನಡೆದ ಘಟನೆಯನ್ನೆಲ್ಲ ಬಿಚ್ಚಿಟ್ಟಾಗ ಮಂಗಳಳಿಗೂ ವಿಷಯದ ಸತ್ಯಾಂಶ ತಿಳಿಯಿತು.ಮಾತನಾಡುತ್ತಲೆ ತನ್ನ ಯೋಚನೆಯಲ್ಲಿದ್ದ ವಿಷಯವನ್ನು ಮಂಗಳಳ ಬಳಿ ಹೇಳಿದಾಗ!ಹಳ್ಳಿ ಹುಡುಗಿ ಒಪ್ಪಿಗೆ ನೀಡದೆ ಪೋನ್ ಕಟ್ ಮಾಡಿಯೇ ಬಿಟ್ಟಳು.ಇತ್ತ ಮಿಥುನ್ನಿಗೆ ಯಾಕೆ ಕೇಳಿಬಿಟ್ನೋ ಅನ್ನೊ ಸಂಕಟ.ಮಂಗಳ ನಡೆದ ಸಂಗತಿಗಳನ್ನು ತನ್ನ ಹೆತ್ತವರಿಗೂ ತಿಳಿಸಿದಾಗ ಮಿಥುನ್ನ ಬಳಿ ಇದ್ದ ಸಂದೇಹ ದೂರವಾಗಿ ಮತ್ತೆ ಕನಸಿನ ಚಿಗುರುಗಳು ಹುಟ್ಟತೊಡಗಿದವು.ಮಿಥುನ್ ತನ್ನ ಆಪ್ತಮಿತ್ರನ ಸೇವೆಗಾಗಿ ನನ್ನನ್ನೇ ಯಾಕೆ ಬರುತ್ತೀಯಾ ಅಂತ ಕೇಳಿದರು!ಪೇಟೆಯಲ್ಲಿ ಬೇರೆ ಕೆಲಸದವರು ಸಿಗಲ್ವಾ, ನಾನೇ ಯಾಕೆ ಬೇಕು, ನಾನು ಹೋಗಲ್ಲಪ್ಪ ,ಈ ಹಳ್ಳೀನೆ ನನಗಿಷ್ಟ ಅದೂ ಅಪ್ಪ ಅಮ್ಮನ ಬಿಟ್ಟು ಹೋಗೋದ ನನಗಾಗಲ್ಲ ಎಂದು ಅವಳಷ್ಟಕೇ ಯೋಚಿಸುತ್ತಿರಬೇಕಾದರೆ!ಮಗಳ ಮುಖ ಕಂಡ ತಾಯಿ ಪ್ರಶ್ನೆಯೊಂದನ್ನು ಮುಂದಿಟ್ಟಳು.ಏನೇ ಮಂಗಳ ನಿನ್ ಹುಡುಗ ಮತ್ತೇನಾದ್ರೂ ಹೇಳಿದ್ನಾ…ಎಂದು ಹೇಳಿ ಮುಗಿಸುವಷ್ಟರಲ್ಲಿ !ಹೂಂ ಅಮ್ಮ ಅವರ ಫ್ರೆಂಡ್ ಮನೆಗೆ ಕೆಲಸಕ್ಕೆ ಹುಡುಗಿ ಬೇಕಂತೆ ಅದಕ್ಕೆ ನಾನು ಹೋಗಬೇಕಂತೆ ಅದೂ ಸಿಟಿಗೆ ಹೋಗೋದಾ ಅದೂ ನಿಮ್ಮನ್ನ ಬಿಟ್ಟು ನನ್ನಿಂದ ಆಗಲ್ಲ ಎಂದು ಪೋನ್ ಕಟ್ ಮಾಡ್ಬಿಟ್ಟೆ ಎಂದು ಹೇಳಿದವಳು ಜಗಲಿಯಿಂದ ಮನೆಯೊಳಗೆ ಹೆಜ್ಜೆ ಹಾಕಿದಳು..
ಮತ್ತೆ ಪೋನ್ ರಿಂಗಾಗತೊಡಗಿತು…..!ಈಗ ಮಿಥುನ್ನ ಭಾವಿಅತ್ತೆಯ ಪ್ರವೇಶ…ಮಿಥುನ್ ಮಂಗಳಳನ್ನು ಈ ಕೆಲಸಕ್ಕೆ ಒಪ್ಪಿಸುವಂತೆ ಒತ್ತಾಯಿಸಿದಾಗ ಯಶೋಧಳಿಗೆ ಹೆಚ್ಚು ಮಾತಾಡಲಾಗಲಿಲ್ಲ,ಆಯ್ತು ಒಪ್ಪಿಸ್ತೀನಿ ಎಂದು ಹೇಳಿದವಳು ಪೋನ್ ಇಟ್ಟು ಬಿಟ್ಟಳು……
(ಮುಂದುವರಿಯುವುದು)













