
ದೇಶದ ಹಲವು ಭಾಗಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಮಧ್ಯಾಹ್ನದ ಸಮಯದಲ್ಲಿ ಜನರು ಹೆಚ್ಚಾಗಿ ಮನೆಯಿಂದ ಹೊರಗೆ ಬರದಂತೆ, ಸಾಕಷ್ಟು ನೀರನ್ನು ಕುಡಿಯಬೇಕು.ಹಗುರ ಮತ್ತು ಗಾಳಿ ಯಾಡುವ ಬಟ್ಟೆಗಳನ್ನು ಧರಿಸಬೇಕು. ಇದಲ್ಲದೆ ತಾಪಮಾನ ಹೆಚ್ಚಿರುವ ಸಮಯದಲ್ಲಿ ಶಾರೀರಿಕ ಶ್ರಮದ ಹೊರಾಂಗಣ ಚಟುವಟಿಕೆಗಳಿಂದ ದೂರ ಇರುವಂತೆ ಸೂಚಿಸಲಾಗಿದೆ.
ಮಕ್ಕಳು ಮತ್ತು ವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಕರಾವಳಿ ಮತ್ತು ಪೂರ್ವ ಪ್ರದೇಶಗಳಲ್ಲಿ ಉಷ್ಣತೆ ಮತ್ತು ತೇವಾಂಶ ಹೆಚ್ಚಿರುವ ವಾತಾವರಣವನ್ನು ನಿರೀಕ್ಷಿಸಲಾಗುತ್ತಿದ್ದು ,ಉತ್ತರ ಭಾರತದ ಹಲವೆಡೆ ರಾತ್ರಿಯ ಸಮಯದಲ್ಲೂ ತಾಪಮಾನ ಹೆಚ್ಚಿರಲಿದೆ.













