28.6 C
Udupi
Saturday, April 25, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 14)

ಚೇತನ್ ವರ್ಕಾಡಿ

ಅಮ್ಮ ಎಲ್ಲಿಂದ ಬರುತ್ತಾಳೆ…?ಹೌದು ಸೌಂಧರ್ಯ ಸಣ್ಣ ಮಗುವಾಗಿದ್ದಾಗಳೆ ಅವಳ ತಾಯಿ ದೇವರ ಪಾದ ಸೇರಿದ್ದಳು.ತಂದೆ ತಾಯಿ ಎಲ್ಲರ ಪ್ರೀತಿಯನ್ನು ಬೆರೆಸಿ ಮಗಳಿಗೆ ಉಣಬಡಿಸಿದ್ದರು ಸುಂದರರಾಯರು. ತನ್ನ ಮುದ್ದು ಮಗಳು ಏನೆ ಕೇಳಿದರೂ ಇಲ್ಲ ಅಂದವರಲ್ಲ!ಚಿಕ್ಕಂದಿನಿಂದಲೆ ತುಂಬಾ ಹಟವಾದಿ ತಾನು ಇಷ್ಟ ಪಟ್ಟ ಯಾವ ವಸ್ತುವೆ ಹಾಗಲಿ ಅದನ್ನು ಬೇರೆ ಯಾರಿಗೂ ಬಿಟ್ಟುಕೊಟ್ಟವಳಲ್ಲ..
ಮಗಳ ಅಳುವಿನ ಸ್ವರ ಕೇಳುತ್ತಿದ್ದಂತೆಯೆ ಪಕ್ಕನೆ ಎದ್ದು ಕುಳಿತ ಸುಂದರರಾಯರು ಮಗಳ ರೂಮಿನತ್ತ ಅವಸರವಾಗಿ ಬಂದೇ ಬಿಟ್ಟರು.ಸೌಂದರ್ಯ ನಿದ್ದೆಯಲ್ಲಿದ್ದರೂ ಅದೇನೊ ಕನಸು ಬಿದ್ದಂತೆ ಅಮ್ಮಾ ಎಂದು ಅಳುತ್ತಿದ್ದಳು ನರಳಾಡುತ್ತಿದ್ದಳು.ಮಗಳ ನೋವಿನ ಸಂಕಟ ತಿಳಿಯದ ಸುಂದರರಾಯರು ಗಾಭರಿಯಿಂದ ಹತ್ತಿರಹೋಗಿ ಎಬ್ಬಿಸಬೇಕಾದರೆ,ಪಕ್ಕನೆ ಕಣ್ಣುಬಿಟ್ಟ ಸೌಂಧರ್ಯ ಅವಳು ಅಲ್ಲಿಯವರೆಗೆ ಕಂಡಂತಹ ಆ ಘಟನೆಗಳು ಅಲ್ಲಿ ಮಾಯವಾಗಿ ತನ್ನ ಪ್ರೀತಿಯ ತಂದೆ ಕಣ್ಣಮುಂದೆ ಕುಳಿತಿದ್ದರು.ಏನಾಯ್ತು ಕಂದ ಯಾಕಿಷ್ಟು ಬೆವರಿದ್ದಿಯಾ ಅಮ್ಮಾ ಕನಸಲ್ಲಿ ಬಂದ್ಲಾ, ಈಗೆ ತಂದೆಯಿಂದ ಹೊರಟ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೌನಿಯಾಗಿ ತಂದೆಯ ಭುಜಕ್ಕೆ ತಲೆಯಿಟ್ಟು ಭಿಕ್ಕಿ ಭಿಕ್ಕಿ ಅಳಲಾರಂಭಿಸಿದಳು…
ಮಗಳೆಂದರೆ ಉಸಿರು ಸುಂದರರಾಯರಿಗೆ,ಮತ್ತೆ ಒತ್ತಾಯಿಸದೆ ಏನಾದರೂ ಬೆಳಗ್ಗೆ ವಿಷಯ ತಿಳಿದರಾಯಿತು ಎಂದು ಮನದಲ್ಲೇ ಆಲೋಚಿಸಿ‌ದವರು ಮಗಳನ್ನು ಸಮಧಾನಿಸಿ ಅಲ್ಲಿಂದ ತನ್ನ ರೂಮಿನ ಕಡೆ ಹೆಜ್ಜೆ ಹಾಕಬೇಕಾದರೆ…….?

(ಮುಂದುವರಿಯುವುದು)..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page