
ಮಂಗಳೂರು: ಉದ್ಯಮಿ ಮುಮ್ತಾಜ್ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ಮೇಲೆ ಕೇಸು ದಾಖಲಾಗಿದ್ದು ಇದೀಗ ಪ್ರಮುಖ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಆಯಿಷಾ ರೆಹಮತ್ ಪರಾರಿಯಾಗಿದ್ದು, ಇದೀಗ ಆಕೆಯನ್ನು ಕೇರಳದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುವ ವೇಳೆ ಬಂಧಿಸಿದ್ದಾರೆ. ಅದಲ್ಲದೆ ಆಯಿಷಾ ಅವರ ಪತಿ ಹಾಗೂ ಪ್ರಕರಣದ ಮತ್ತೋರ್ವ ಆರೋಪಿ ಶೋಹೇಬ್, ಸಿರಾಜ್ ಎಂಬುವರನ್ನು ಕೂಡ ಬಂದಿಸಲಾಗಿದೆ.













