
ಬೆಂಗಳೂರು: ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡುವ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಫ್ ಐ ಆರ್ ಆದ ಕೂಡಲೇ ಸಿಎಂ ರಾಜೀನಾಮೆ ನೀಡಬೇಕೆಂದಾದರೆ ಗೋದ್ರಾ ಪ್ರಕರಣದಲ್ಲಿ ಮೋದಿ ರಾಜೀನಾಮೆ ನೀಡಿದ್ದಾರೆ ಅಮಿತ್ ಶಾ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ ಅವರು ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಯಾರನ್ನೇ ಆಗಲಿ ರಾಜಕೀಯದಲ್ಲಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡಬಾರದು. ಸಿದ್ದರಾಮಯ್ಯರವರ ಇಮೇಜ್ ಡ್ಯಾಮೇಜ್ ಮಾಡಿದರೆ ಪಕ್ಷಕ್ಕೂ ತೊಂದರೆಯಾಗುತ್ತದೆ. ಸಿದ್ದರಾಮಯ್ಯ ಇವತ್ತು ಇರಬಹುದು ನಾಳೆ ಇಲ್ಲದೆ ಇರಬಹುದು ಪಕ್ಷ ಮುಂದುವರೆಯಲಿದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿ ಕಾಂಗ್ರೆಸ್ ಮೂಲ ಮತಗಳನ್ನು ಹಾಳು ಮಾಡುವ ಕಾರಣಕ್ಕಾಗಿ ಇಂತಹ ಕೆಲಸಗಳನ್ನು ಮಾಡುತ್ತಿದೆ. ಏನು ಅಂತಹ ವಿಷಯವಿಲ್ಲದೆ ದಿನ ಬೆಳಗಾದರೆ ಮೂಡಾ ಮೂಡಾ ಎನ್ನುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.













