ಸುವರ್ಣ ಕರ್ನಾಟಕ ರಂಗೋತ್ಸವ (ನಾಟಕ, ಯಕ್ಷಗಾನ, ತಾಳಮದ್ದಳೆ “50 ದಿನಗಳ ರಂಗೋತ್ಸವ”

ನಮ ತುಳುವೆರ್ ಕಲಾ ಸಂಘಟನೆ ರಿ. ನಾಟ್ಕದೂರು, ಮುದ್ರಾಡಿ ಹೆಬ್ರಿ ವತಿಯಿಂದ ಸುವರ್ಣ ಕರ್ನಾಟಕ ರಂಗೋತ್ಸವ (ನಾಟಕ, ಯಕ್ಷಗಾನ, ತಾಳಮದ್ದಳೆ “50 ದಿನಗಳ ರಂಗೋತ್ಸವ”ಸೆಪ್ಟೆಂಬರ್ 27ರಿಂದ ನವಂಬರ್ 15ರವರೆಗೆ ಸ್ಥಳ ಬಿ.ವಿ ಕಾರಂತ ಬಯಲು ರಂಗ ಮಂದಿರ ಇಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದೆ.
ಇಂದು ದಿ.27.09 2024 ರಂದು ಶುಕ್ರವಾರ ಸಂಜೆ 6:30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು ಆಳ್ವಾಸ್ ಎಜುಕೇಶನ್ ಟ್ರಸ್ಟ್ ಮೂಡಬಿದ್ರೆ ಇದರ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಸಮಾರಂಭದ ಅಧ್ಯಕ್ಷತೆಯನ್ನು ಸುಕುಮಾರ್ ಮೋಹನ್ ಅವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಆನಂದ್ ಕುಂದರ್ ಗೀತಾನಂದ ಫೌಂಡೇಶನ್ ಕೋಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ಮತ್ತು ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಬ್ರಾಹ್ಮ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಮಲಶಿಲೆಯ ಧರ್ಮದರ್ಶಿಗಳಾದ ಶೆಟ್ಟಿಪಾಲು ಸದಾನಂದ ಚಾತ್ರ ಮತ್ತು ಕರ್ನಾಟಕ ಅಕಾಡೆಮಿಯ ಸಮನ್ವಯ ಸದಸ್ಯರಾದ ಜಗದೀಶ್ ಜಾಲ ಇವರು ಭಾಗವಹಿಸಲಿದ್ದಾರೆ ಸಂಜೆ 7:30ಕ್ಕೆ ಬೇಲೂರು ರಘನಂದನ್ ಇವರ ನಿರ್ದೇಶನದಲ್ಲಿ ಶೋಭಾ ಪ್ರಭು ರಚಿಸಿದ ಆದಿಶಕ್ತಿ ನಾಟಕವು ಕಾಜಾಣ ತಂಡದಿಂದ ಪ್ರದರ್ಶನಗೊಳ್ಳಲಿದೆ.














