28.2 C
Udupi
Thursday, April 30, 2026
spot_img
spot_img
HomeBlogತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಹಾಗೂ ಸರಕಾರಿ ಪದವಿ...

ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬೈಲೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನಾಚರಣೆಯ ಸಲುವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ

ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬೈಲೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನಾಚರಣೆಯ ಸಲುವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು, ಬೈಲೂರು ಇಲ್ಲಿ ದಿನಾಂಕ 25.11.2024 ರಂದು ಪೂರ್ವಾಹ್ನ 9:45 ಕ್ಕೆ ನಡೆಯಿತು.

ಸಮಾರಂಭವನ್ನು ಕೋಮಲ ಆರ್.ಸಿ. ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಕಾನೂನಿನ ಪಾತ್ರ ದೊಡ್ಡದು ಎಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯವಾದಿಗಳ ಸಂಘದ ಕೋಶಾಧಿಕಾರಿಗಳಾದ ಅರುಣ್ ಕುಮಾ‌ರ್ ಶೆಟ್ಟಿ ಅವರು ಮಹಿಳೆಯರ ಮೇಲಿನ ದೌರ್ಜನ್ಯ ನಡೆದರೆ, ವಿದ್ಯಾರ್ಥಿಗಳಾದರೆ ಶಾಲೆಯ ಮುಖ್ಯಸ್ಥರ, ಮನೆಯಲ್ಲಿ ಆದರೆ ಮನೆಯ ಹಿರಿಯರ ಇಲ್ಲವೇ ಪೊಲೀಸರ ಗಮನಕ್ಕೆ ತರಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಸದಾನಂದ ಸಾಲಿಯಾನ್ ರವರು ಮಹಿಳೆಯರ ಮೇಲೆ ಹಿಂದಿನ ಕಾಲದಲ್ಲಿ ಬಹಳ ದೌರ್ಜನ್ಯವು ನಡೆಯುತ್ತಿತ್ತು ತದನಂತರ ಸಂವಿಧಾನದಲ್ಲಿ ನೀಡಿದ ಹಕ್ಕಿನಿಂದಾಗಿ ದೌರ್ಜನ್ಯ ಕಡಿಮೆಯಾಯಿತು ಮತ್ತು ಪ್ರಸ್ತುತ ಪೋಕ್ಸ್ ಕಾಯ್ದೆಯಿಂದ ದೌರ್ಜನ್ಯ ಒಳಗಾದವರು ಏನು ಕ್ರಮ ತೆಗೆದುಕೊಳ್ಳಬೇಕು ಮತ್ತು ದೌರ್ಜನ್ಯಕ್ಕೊಳಗಾದ ಅಪ್ರಾಪ್ತರು ಯಾವ ರೀತಿ ಕಾನೂನಿನಿಂದ ರಕ್ಷಣೆ ಪಡೆಯಬಹುದು ಎಂಬುದಾಗಿ ವಿವರವಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷರಾದ ಸುನಿಲ್ ಕುಮಾ‌ರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯಾಧೀಶರು ಹಾಗೂ ಸಂಪನ್ಮೂಲ ವ್ಯಕ್ತಿ ಅವರು ತಿಳಿಸಿದಂತೆ ಮಹಿಳೆಯರು ಹೇಗೆ ದೌರ್ಜನ್ಯವನ್ನು ತಡೆಯಲು ಪ್ರಯತ್ನಿಸಬಹುದು ಎಂದು ತಿಳಿಸಿದರು. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ್ ಸರ್ ಅವರು ಇಂತಹ ಕಾರ್ಯಕ್ರಮಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು ವಿದ್ಯಾರ್ಥಿನಿ ಕುಮಾರಿ ಲಹರಿ ಸೆಕೆಂಡ್ ಪಿಯುಸಿ ಕಾಮರ್ಸ್ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿನಿ ಕುಮಾರಿ ಅಕ್ಷಿತಾ ಸೆಕೆಂಡ್ ಪಿಯುಸಿ ಆರ್ಟ್ಸ್ ವಂದನಾರ್ಪಣೆ ಗೈದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page