
ಬದುಕಿನ ಯಶಸ್ಸು ಸಾಧಿಸಲು ಕೌಶಲ್ಯಾಭಿವೃದ್ದಿಯ ಅಗತ್ಯತೆ: ಚಿತ್ರಾ ರಾವ್ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ ಪ್ರೊಫೆಷನಲ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು, ಕಾರ್ಕಳ ತನ್ನ ವಿದ್ಯಾರ್ಥಿಗಳಿಗೆ ವೃತ್ತಿಜೀವನದಲ್ಲಿ ಅಗತ್ಯವಾದ ಕೌಶಲ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ “ವೃತ್ತಿಪರ ಅಭಿವೃದ್ಧಿಯ ಅವಶ್ಯಕತೆಗಳು” ಎಂಬ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಂಡಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಅಸಿಸ್ಟೆಂಟ್ ಪ್ಯಾರಾಪ್ಲಾನರ್, ಕರಿಸ್ಮಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಚಿತ್ರಾ ರಾವ್, ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದರು. ಅವರು ತಮ್ಮ ಬೌದ್ಧಿಕ ಭಾಷಣದಲ್ಲಿ ವೃತ್ತಿಪರ ಬದುಕಿನ ಯಶಸ್ಸು ಸಾಧಿಸಲು ಕೌಶಲ್ಯಾಭಿವೃದ್ದಿಯ ಅಗತ್ಯತೆ, ಸಮಯ ನಿರ್ವಹಣೆ, ಮತ್ತು ದೀರ್ಘಕಾಲೀನ ಉದ್ದೇಶಗಳ ಮಾರ್ಗದರ್ಶನದ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಕೌಶಲ ಅಭಿವೃದ್ಧಿಯ ಮಹತ್ವ ಹಾಗೂ ಮುಂದೆ ಬರುವ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಮಾಡಿಕೊಳ್ಳಬೇಕೆಂದು ಹೇಳಿದರು. ಡಾ. ಸುಬ್ರಹ್ಮಣ್ಯ ಕೆ.ಸಿ., ಪ್ರೇರಣಾ ಸಂಯೋಜಕರು, ಹಾಗೂ ಸಂಧ್ಯಾ ಭಂಡಾರಿ, ಸಹ ಸಂಯೋಜಕರು, ಡಾ. ಸುದರ್ಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪೂರ್ಣಿಮಾ ನಿರೂಪಿಸಿ , ರಕ್ಷಿತಾ ಸ್ವಾಗತಿಸಿ,ಕ್ರತಿ ಧನ್ಯವಾದಗಳು ಮಾಡುವ ಮುಖಾಂತರ ಎಲ್ಲರ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.



















