
ಡಾ. ಎನ್ ಎಸ್ ಎ ಎಮ್ ಶಾಲೆ ಕನ್ನಡ ಮಾಧ್ಯಮ ಪ್ರೌಢ ಶಾಲೆ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನಿಟ್ಟೆ ಇಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ರಾಧಾ ಪ್ರಭು ಇವರು ಗಾಂಧೀಜಿಯವರು ನಡೆದು ಬಂದ ರೀತಿ ಅವರ ಪ್ರಾಮಾಣಿಕತೆ ಸರಳ ಜೀವನ ಶಿಸ್ತು ಇವುಗಳನ್ನೆಲ್ಲ ಮಕ್ಕಳಿಗೆ ತಿಳಿ ಹೇಳಿದರು. ಅದೇ ರೀತಿ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕಿಯಾದ ಉಷಾ ಶೆಟ್ಟಿಯವರು ದೇಶಕ್ಕೋಸ್ಕರ ಸ್ವಾತಂತ್ರ್ಯ ಯಾವ ರೀತಿ ದೊರಕಿಸಿ ಕೊಟ್ಟರು ಯಾವ ರೀತಿ ಹೋರಾಡಿದರು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿಪಾಲ್ ಹೆಗ್ದೆ ಹಾಗೂ ಸಂಗೀತ ಇವರು ಉಪಸ್ಥಿತರಿದ್ದರು













