29.1 C
Udupi
Saturday, April 25, 2026
spot_img
spot_img
HomeBlogನಿಟ್ಟೆ : ಆ:8 ರಿಂದ ಆ:10 ರವರೆಗೆ ಶಾರದಾ ಪೂಜಾ ಮಹೋತ್ಸವ

ನಿಟ್ಟೆ : ಆ:8 ರಿಂದ ಆ:10 ರವರೆಗೆ ಶಾರದಾ ಪೂಜಾ ಮಹೋತ್ಸವ

ಆ ಪ್ರಯುಕ್ತ ನಡೆಯುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು

ಆ:08 ಮಂಗಳವಾರದಿಂದ ಆ:10 ಗುರುವಾರದವರೆಗೆ ನಿಟ್ಟೆಯ ನಲ್ಕೆದಬೆಟ್ಟು ಬಾಕಿಮಾರು ವೇದಿಕೆಯಲ್ಲಿ ಶಾರದಾ ಪೂಜಾ ಮಹೋತ್ಸವ ನಡೆಯಲಿದೆ.ಈ ಪ್ರಯುಕ್ತ ಆ 08 ಮಂಗಳವಾರದಂದು ಸಂಜೆ 5:00ಗೆ ಶ್ರೀ ಶಾರದೆಯ ಪೂರ್ಣ ಕುಂಭ ಕಲಶ ಮೆರವಣಿಗೆ ನಡೆಯಲಿದೆ‌.

ಬುಧವಾರದಂದು ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಲಿದ್ದು ಬೆಳಿಗ್ಗೆ 9:30 ರ ಬಳಿಕ ಶ್ರೀ ಲಕ್ಷ್ಮಣ ಕುಡ್ವ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯ ಬಳಿಕ ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8ರಿಂದ 11ರ ತನಕ ‘ಕಥೆ ಎಡ್ಡೆಂಡು’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಆ :10 ಗುರುವಾರದಂದು ಬೆಳಗ್ಗೆ 7 ಗಂಟೆಗೆ ಪ್ರಾತಃ ಪೂಜೆ ನಡೆಯಲಿದ್ದು ಬಳಿಕ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ 1ರಿಂದ 3:30 ವರೆಗೆ ತೆಂಕು, ಬಡಗು ತಿಟ್ಟಿನ ಗಾನ ವೈಭವ ನಡೆಯಲಿದ್ದು ಬಳಿಕ ಶ್ರೀ ಶಾರದಾದೇವಿಯ ಹರಕೆ ಸೀರೆಗಳ ಹರಾಜು ನಡೆಯಲಿದೆ.

ಆ ಬಳಿಕ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ನಡೆಯಲಿದ್ದು ಮಹಾಪೂಜೆ ವಿಸರ್ಜನಾ ಪೂಜೆಯ ಬಳಿಕ ಸಂಜೆ 6:30ಕ್ಕೆ ಶೋಭಯಾತ್ರೆ ಆರಂಭವಾಗಲಿದೆ ಎಂದು ಕಾರ್ಯದರ್ಶಿ ದಿವಾಕರ್ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page