
ನವದೆಹಲಿ: ಕೇಂದ್ರ ಸರ್ಕಾರವು ದಾರಿತಪ್ಪಿಸುವ ಜಾಹೀರಾತು ಕೋಚಿಂಗ್ ಸೆಂಟರ್‌ಗಳಿಗೆ ಸಂಬಂಧಿಸಿದ ಹಾಗೂ ಶೇ.100ರಷ್ಟು ಖಚಿತ ಉದ್ಯೋಗಗಳಂತಹ ಹುಸಿ ಭರವಸೆ ನೀಡುವ ತರಬೇತಿ ಸಂಸ್ಥೆಗಳನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಹೊಸ ಮಾರ್ಗಸೂಚಿಯ ಪ್ರಕಾರ, ಇವುಗಳು ಒದಗಿಸುವ ಕೋರ್ಸ್, ಅವಧಿ, ಬೋಧಕರ ಕುರಿತ ಮಾಹಿತಿ, ಶುಲ್ಕ ಮರುಪಾವತಿ ನೀತಿ, ಪರೀಕ್ಷೆಗಳು, ಖಚಿತ ಉದ್ಯೋಗಾವಕಾಶ ಹಾಗೂ ಆದಾಯ ಏರಿಕೆ ಕುರಿತು ಯಾವುದೇ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ.
ಹೊಸ ಮಾರ್ಗಸೂಚಿ ಪ್ರಕಾರ ‘ಕೋಚಿಂಗ್’ ಎಂದರೆ ಅದು ಶೈಕ್ಷಣಿಕ ಬೆಂಬಲ, ಶಿಕ್ಷಣ, ಮಾರ್ಗದರ್ಶನ, ಅಧ್ಯಯನ ಕಾರ್ಯಕ್ರಮ ಹಾಗೂ ಟ್ಯೂಷನ್ ಒಳಗೊಂಡಿರಬೇಕು. ಆದರೆ ಆಪ್ತ ಸಮಾಲೋಚನೆ, ಕ್ರೀಡೆ, ಕ್ರಿಯಾತ್ಮಕ ಚಟುವಟಿಕೆಗಳು ಇದಕ್ಕೆ ಹೊರತಾಗಿರಬೇಕು. ಈ ಸಂಸ್ಥೆಗಳು ಒಪ್ಪಿಗೆಯಿಲ್ಲದೆ ಯಶಸ್ವಿ ಅಭ್ಯರ್ಥಿಗಳ ಪೋಟೋ, ಶೈಕ್ಷಣಿಕ ಸಾಧನೆಗಳನ್ನು ಪ್ರದರ್ಶಿಸುವಂತಿಲ್ಲ



















