27.4 C
Udupi
Monday, September 7, 2026
spot_img
spot_img
HomeBlogರಾಹುಲ್ ಗಾಂಧಿಗೆ ಕೊಟ್ಟ ಮಾತಿಗೆ ರಾಜೀನಾಮೆ

ರಾಹುಲ್ ಗಾಂಧಿಗೆ ಕೊಟ್ಟ ಮಾತಿಗೆ ರಾಜೀನಾಮೆ

ರಾಜೀನಾಮೆ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಆರೋಪಗಳಿಗೆ ತಿರುಗೇಟು ನೀಡಿದರು.

“ಗೃಹಲಕ್ಷ್ಮಿ ಯೋಜನೆಯ ಹಣ ನೀಡದ ಕಾರಣ ನಾನು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡೆ ಎಂದು ಸಿ.ಟಿ. ರವಿ ಹೇಳುತ್ತಾರೆ. ಆದರೆ ನಾನು ಆರಂಭದಲ್ಲಿಯೇ ರಾಹುಲ್ ಗಾಂಧಿ ಅವರಿಗೆ ಮಾತು ನೀಡಿದ್ದೆ. ಅವರು ಸ್ಥಾನ ಬಿಟ್ಟುಕೊಡುವಂತೆ ಹೇಳಿದ ಕಾರಣಕ್ಕೆ ನಾನು ರಾಜೀನಾಮೆ ನೀಡಿದೆ” ಎಂದು ಸಿದ್ದರಾಮಯ್ಯ ಹೇಳಿದರು.

ತಾವು ರಾಜೀನಾಮೆ ನೀಡಬಾರದು ಎಂದು ಅನೇಕರು ಸಲಹೆ ನೀಡಿದ್ದರು. ಆದರೂ ಪಕ್ಷದ ನಾಯಕತ್ವಕ್ಕೆ ನೀಡಿದ ಮಾತಿಗೆ ಬದ್ಧರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಅವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಿ.ಟಿ. ರವಿ ಮಾಡುತ್ತಿರುವ ಆರೋಪಗಳು ಆಧಾರರಹಿತ ಎಂದು ಟೀಕಿಸಿದ ಸಿದ್ದರಾಮಯ್ಯ, “ನಾಯಕನಾದವನು ತಾನು ನೀಡಿದ ಮಾತಿಗೆ ಬದ್ಧವಾಗಿರಬೇಕು” ಎಂದು ಹೇಳಿದರು.

ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರ ಕ್ಷೇತ್ರದ ಜನರು ಅವರನ್ನು ‘ಲೂಟಿ ರವಿ’ ಎಂದು ಕರೆಯುತ್ತಾರೆ ಎಂದಾಗ ಸಭಿಕರಿಂದ ಭಾರಿ ಕರತಾಡನ ವ್ಯಕ್ತವಾಯಿತು.

ತಮ್ಮ ರಾಜೀನಾಮೆ ಪ್ರತಿಪಕ್ಷಗಳ ಒತ್ತಡದಿಂದಲ್ಲ, ಪಕ್ಷದ ಶಿಸ್ತು ಮತ್ತು ತತ್ವಗಳಿಗೆ ಬದ್ಧತೆಯಿಂದ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page