
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಮೈಸೂರು ಜಿಲ್ಲಾ ಸಂಸ್ಥೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯು ದಿನಾಂಕ 12.11.2024ರಂದು ವಿದ್ಯಾವರ್ಧಕ ಕಾಲೇಜು ಗೋಕುಲಂ ಮೈಸೂರು ಇಲ್ಲಿ ನೆರವೇರಿತು. ವಿಭಾಗ ಮಟ್ಟದಲ್ಲಿ 8 ಜಿಲ್ಲೆಗಳು ಭಾಗವಹಿಸಿದ್ದು, 16 ಕಬ್ ತಂಡಗಳಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು. ಕಾರ್ಕಳ ಇಲ್ಲಿಯ ಕಬ್ ದಳ ವಿದ್ಯಾರ್ಥಿಗಳಾದ ಆದಿತ್ ವರ್ಮ ಜೈನ್, ಮೇದಾಂಶ್ ಪಡುಮಲೆ, ಆರ್ಯನ್ ಜೈನ್, ಪ್ರಜ್ಞಾನ್ ಕೋಟ್ಯಾನ್, ಅಮೋಘ್ ಬಾಳಿಗ, ದೃವ್ ನಾಯಕ್, ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಶಶಿಕಲಾ ಕೆ. ಹೆಗ್ಡೆ, ಕುಮಾರಯ್ಯ ಹೆಗ್ಡೆ, ಆಡಳಿತ ಅಧಿಕಾರ ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.



















