31.5 C
Udupi
Friday, April 24, 2026
spot_img
spot_img
HomeBlogಕೆಲವು ಯುಪಿಐ ಪಾವತಿ ಮಿತಿ 5 ಲಕ್ಷ ರೂಗೆ ಹೆಚ್ಚಳ; ಇಂದಿನಿಂದ ಸೌಲಭ್ಯ ಜಾರಿ

ಕೆಲವು ಯುಪಿಐ ಪಾವತಿ ಮಿತಿ 5 ಲಕ್ಷ ರೂಗೆ ಹೆಚ್ಚಳ; ಇಂದಿನಿಂದ ಸೌಲಭ್ಯ ಜಾರಿ

ನವದೆಹಲಿ: ಸಾಮಾನ್ಯವಾಗಿ ಯುಪಿಐ ಮೂಲಕ ಹಣ ಪಾವತಿಸಬೇಕಾದರೆ ಒಂದು ಟ್ರಾನ್ಸಾಕ್ಷನ್ನಲ್ಲಿ ಒಂದು ಲಕ್ಷ ರೂವರೆಗೆ ಮಾತ್ರ ಹಣ ಕಳುಹಿಸಲು ಸಾಧ್ಯವಿತ್ತು. ಇನ್ಷೂರೆನ್ಸ್, ಫಾರೀನ್ ರೆಮಿಟೆನ್ಸ್, ಕ್ಯಾಪಿಟಲ್ ಮಾರ್ಕೆಟ್ಗೆ ಸಂಬಂಧಿಸಿದ ಪಾವತಿಗೆ ಯುಪಿಐ ವಹಿವಾಟು ಮಿತಿ 2 ಲಕ್ಷ ರೂ ಇದೆ. ಇದೀಗ ತೆರಿಗೆ ಪಾವತಿ ಸೇರಿದಂತೆ ಕೆಲ ನಿರ್ದಿಷ್ಟ ಪಾವತಿಗಳಿಗೆ ಯುಪಿಐ ಮಿತಿಯನ್ನು 5 ಲಕ್ಷ ರೂಗೆ ಏರಿಕೆ ಮಾಡಲಾಗಿದ್ದು ಎನ್ಪಿಸಿಐ ತಂದಿರುವ ಈ ಬದಲಾವಣೆ ಇಂದಿನಿಂದ ಜಾರಿಯಾಗಲಿದೆ.ಐದು ಲಕ್ಷ ಪಾತಿ ಮಿತಿ ಇರುವ ಯುಪಿಐ ಟ್ರಾನ್ಸಾಕ್ಷನ್ಗಳು:ತೆರಿಗೆ ಪಾವತಿಆಸ್ಪತ್ರೆಶಿಕ್ಷಣ ಸಂಸ್ಥೆಐಪಿಒಆರ್ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್ಇಂದಿನಿಂದ ಈ ಮೇಲಿನ ಕಾರ್ಯಗಳಿಗೆ ಮತ್ತು ಸಂಸ್ಥೆಗಳಿಗೆ ಒಂದೇ ಟ್ರಾನ್ಸಾಕ್ಷನ್ನಲ್ಲಿ 5 ಲಕ್ಷ ರೂವರೆಗೂ ಯುಪಿಐ ಮೂಲಕ ಹಣ ಕಳುಹಿಸಬಹುದಾಗಿದೆ.

ಬ್ಯಾಂಕುಗಳು, ಪೇಮೆಂಟ್ ಸರ್ವಿಸ್ ನೀಡುಗರು, ಯುಪಿಐ ಆ್ಯಪ್ಗಳು ಸೇರಿದಂತೆ ಪೇಮೆಂಟ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಭಾಗಿಯಾಗಿರುವ ಎಲ್ಲಾ ಸದಸ್ಯರಿಗೂ ಎನ್ಪಿಸಿಐ ಹೊಸ ಯುಪಿಐ ಟ್ರಾನ್ಸಾಕ್ಷನ್ ಅಪ್ಪರ್ ಲಿಮಿಟ್ ಬಗ್ಗೆ ಮೊದಲೇ ಸೂಚನೆ ನೀಡಿದೆ. ವೆರಿಫೈ ಆಗಿರುವ ವರ್ತಕರ ಎಂಸಿಸಿ 9311 ಕೆಟಗರಿಗೆ ಈ ಟ್ರಾನ್ಸಾಕ್ಷನ್ ಲಿಮಿಟ್ ಹೆಚ್ಚಳ ಆಗಿರುವುದನ್ನು ಇವು ಖಾತ್ರಿಪಡಿಸಬೇಕಾಗುತ್ತದೆ.ತೆರಿಗೆ ಪಾವತಿಗಳನ್ನು ಸ್ವೀಕರಿಸುವ ವರ್ತಕರು ಆ ನಿಯಮಕ್ಕೆ ಸಂಬದ್ಧವಾಗಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕ ವೆರಿಫೈಡ್ ಮರ್ಚೆಂಟ್ಗಳ ಪಟ್ಟಿಗೆ ಸೇರಿಸಬೇಕು. ಈ ವೆರಿಫೈಡ್ ವರ್ತಕರು ಯುಪಿಐ ಅನ್ನು ಪೇಮೆಂಟ್ ಮೋಡ್ ಆಗಿ ಆಯ್ಕೆ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ಟ್ಯಾಕ್ಸ್ ಪೇಮೆಂಟ್ ವಿಭಾಗದಲ್ಲಿ ಟ್ರಾನ್ಸಾಕ್ಷನ್ ಮಿತಿ ಏರಿಕೆ ಆಗಿರುವುದಿಲ್ಲ. ಅಂದರೆ, ಗ್ರಾಹಕರು ಒಂದು ಲಕ್ಷ ರೂ ಹಣವನ್ನು ಒಂದು ವಹಿವಾಟಿನಲ್ಲಿ ಪಾವತಿಸಲು ಆಗುವುದಿಲ್ಲ.ಹಾಗೆಯೇ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಐದು ಲಕ್ಷ ರೂವರೆಗೆ ಹಣ ಪಾವತಿಸಬಹುದಾಗಿದೆ. ಚೆಕ್ ಬಳಕೆ ಅಥವಾ ಕಾರ್ಡ್ ಬಳಕೆಯ ಅವಶ್ಯಕತೆ ಇಲ್ಲದೇ ಯುಪಿಐ ಮೂಲಕ ಹಣ ಪಾವತಿಸಬಹುದು.ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆಯ ಅವಶ್ಯಕತೆ ಇರುವ ಐಪಿಒ ಮತ್ತು ಆರ್ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್ಗಳಲ್ಲಿ ನೀವು ಯುಪಿಐ ಮೂಲಕ ಹಣ ಪಾವತಿಸಬಹುದು. ಇಲ್ಲೂ ಕೂಡ ಒಂದು ವಹಿವಾಟಿನಲ್ಲಿ 5 ಲಕ್ಷ ರೂವರೆಗೂ ಪಾವತಿ ಮಾಡಬಹುದಾಗಿದೆ.ಮೂರು ಕೆಟಗರಿಯ ವಹಿವಾಟುಗಳಿಗೆ ಪಾವತಿ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಲಾಗಿದ್ದರೂ ಎಲ್ಲಾ ಬ್ಯಾಂಕುಗಳು ಅಥವಾ ಯುಪಿಐ ಪ್ಲಾಟ್ಫಾರ್ಮ್ಗಳು ಮಿತಿ ಹೆಚ್ಚಿಸುತ್ತವೆ ಎಂಬುದು ಖಾತ್ರಿಯಿಲ್ಲ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page