
ಕಾರ್ಕಳ: ರಾತ್ರಿ ಸುಮಾರು 10.45 ರ ಸಮಯಕ್ಕೆ ,ಕುಕ್ಕುಂದೂರು ದುರ್ಗಾ ಪರಮೇಶ್ವರಿ ದೇವಸ್ತಾನದ ರಸ್ತೆ ಬಳಿ,
ಚಿರತೆ ಪತ್ತೆಯಾಗಿದ್ದು ಸ್ಥಳಿಯರಾದ, ಎಡ್ವರ್ಡ್ ಡಿಸೋಜಾ ರವರು
ಮನೆಗೆ ತೆರೆಳುವ ಸಮಯದಲ್ಲಿ, ಚಿರತೆ ರಸ್ತೆಯಿಂದ ಹಾದು ಹೋಗಿದ್ದು,
ಬೆಳಗಿನ ಜಾವ 3.10, ಅವರ ಮನೆಯ ಸಾಕು ನಾಯಿಯ ಮೇಲೆ ದಾಳಿ ಮಾಡಿರುತ್ತದೆ ,
ಅದೇ ಸಮಯಕ್ಕೆ ಅವರು ಮನೆಯ ಹೊರಗೆ ಬಂದಿದ್ದು, ಚಿರತೆ ಕಾಂಪೌಂಡ್ ಹಾರಿ, ಓಡಿ ಹೋಗಿರುತ್ತದೆ.
ಈ ಬಗ್ಗೆ ವನ್ಯ ಜೀವಿ ವಿಭಾಗ ಕಾರ್ಕಳ ಅರಣ್ಯ ಅಧಿಕಾರಿ” ಜಿ ಡಿ ದಿನೇಶ್” ರವರಿಗೆ ರಾತ್ರಿ ಮಾಹಿತಿ ನೀಡಿದ್ದು,ಈ ಬಗ್ಗೆ ಚಿರತೆಯು ಪತ್ತೆಯಾದಲ್ಲಿ, ಮಾಹಿತಿಯನ್ನು ನೀಡಿ ಎಂದು ಕೋರಿರುತ್ತಾರೆ.
ಚಿರತೆಯು ಸ್ಥಳೀಯರಿಗೆ ಕಂಡು ಬಂದಲ್ಲಿ ,ಅದನ್ನು ಸೆರೆ ಹಿಡಿಯಲು, ಬೋನನ್ನು ಇರಿಸುವುದಾಗಿ ತಿಳಿಸಿರುತಾರೆ. ಈ ಬಗ್ಗೆ ಸ್ಥಳೀಯರು ಕೂಡಲೇ ಮಾಹಿತಿಯನ್ನು ನೀಡಬೇಕು, ಎಂದು ತಿಳಿಸಿರುತ್ತಾರೆ.



















