
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ಸಿಗರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಕಾಂಗ್ರೆಸ್ ಹಲವು ಬಾರಿ ಸಂವಿಧಾನಕ್ಕೆ ಅಪಮಾನ ಮಾಡಿದ್ದು ಸಂವಿಧಾನದ ಪ್ರತಿ ಹಿಡಿದು ಹೋದ ಮಾತ್ರಕ್ಕೆ ಜನ ಕಾಂಗ್ರೆಸ್ ಪಕ್ಷವನ್ನು ನಂಬಲಾರರು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಹೇಗೆ ಅಪಮಾನ ಮಾಡಿದರು. ಅಂಬೇಡ್ಕರ್ ಅವರನ್ನು ಎಷ್ಟು ಅಪಮಾನದಿಂದ ನಡೆಸಿಕೊಂಡರು ಎಂಬುದು ಜನಕ್ಕೆ ಗೊತ್ತಿದೆ. ಹಿಂದಿನಿಂದಲೂ ಸಂವಿಧಾನ ರಚನೆಕಾರ ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಲೇ ಬಂದಿದ್ದಾರೆ. ರಾಹುಲ್ ಗಾಂಧಿ ಈಗ ಸಂವಿಧಾನದ ಪ್ರತಿ ಹಿಡಿದು ಹೊರಟಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಮೇಲೆ ಅಷ್ಟು ಗೌರವವಿದ್ದರೆ ಸಂಸತ್ ಅಧಿವೇಶನಕ್ಕೆ ಸಹಕಾರ ನೀಡಲಿ ಮತ್ತು ಸದನವನ್ನು ಸುಗಮಗೊಳಿಸಲಿ ಎಂದು ಹೇಳಿದರು.



















