26.3 C
Udupi
Thursday, May 7, 2026
spot_img
spot_img
HomeBlogಕಾರ್ಕಳದ ಪರ್ಪಲೆಗಿರಿಯಲ್ಲಿ ಕಲ್ಕುಡ- ಕಲ್ಲುರ್ಟಿ- ತೂಕತ್ತೆರಿ ಧರ್ಮದ ಸಾನಿಧ್ಯ ಕಲಶೋತ್ಸವ ಹಾಗೂ ವೈಭದ ಸಿರಿ ಸಿಂಗಾರ...

ಕಾರ್ಕಳದ ಪರ್ಪಲೆಗಿರಿಯಲ್ಲಿ ಕಲ್ಕುಡ- ಕಲ್ಲುರ್ಟಿ- ತೂಕತ್ತೆರಿ ಧರ್ಮದ ಸಾನಿಧ್ಯ ಕಲಶೋತ್ಸವ ಹಾಗೂ ವೈಭದ ಸಿರಿ ಸಿಂಗಾರ ನೇಮೋತ್ಸವ

ದಿನಾಂಕ 17.05.2025 ರಿಂದ 19.05.2025 ರವರೆಗೆ ಹಿಂದೂ ಸಮಾಜದ ಐಕ್ಯತೆಗಾಗಿ ಸುಮಾರು 500 ವರ್ಷಗಳಿಂದ ಕಾರ್ಕಳದ ಪರ್ಪಲೆಗಿರಿಯಲ್ಲಿ ನೆಲೆಸಿರುವ ಶ್ರೀ ಕಲ್ಕುಡ-ಕಲ್ಲುರ್ಟಿ-ತೂಕತ್ತರಿ ಧರ್ಮದೈವಗಳ ಶಿಲಾಮಯ ಗರ್ಭಗೃಹ ಸಮರ್ಪಣೆ, ದೈವಬಿಂಬ ಪುನಃಪ್ರತಿಷ್ಠೆ- ಸಾನಿಧ್ಯ ಕಲಶೋತ್ಸವ ಹಾಗೂ ವೈಭವದ ಸಿರಿ ಸಿಂಗಾರ ನೇಮೋತ್ಸವ ನಡೆಯಲಿದೆ.

ದಿನಾಂಕ 17.05.2025ನೇ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಕಾರ್ಕಳ ಬಂಡಿಮಠ ಮೂಡು ಗಣಪತಿ ದೇವರ ಸಾನಿಧ್ಯದಿಂದ ಪರ್ಪಲೆಗಿರಿಯವರೆಗೆ ವೈಭವದ ಹಸಿರು ಕಾಣಿಕೆ ಮೆರವಣಿಗೆ ನಡೆಯಲಿದೆ.ದಿನಾಂಕ 18.05.2025ನೇ ಭಾನುವಾರದಂದು ಸಾಯಂಕಾಲ 5:00ಯಿಂದ ಋತ್ವಿಜರ ಸ್ವಾಗತ, ಶಿಲ್ಪ ಪೂಜೆ, ಆಲಯ ಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗೋ ಪ್ರವೇಶ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದ್ವಾರ ಪೂಜೆ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿದೆ.

ದಿನಾಂಕ 19.05.2025ನೇ ಸೋಮವಾರದಂದು ಬೆಳಗ್ಗೆ 7:30 ರಿಂದ ಪುಣ್ಯಾಹ, ಮಹಾಗಣಪತಿಯಾಗ, ಅಷ್ಟೋತ್ತರ ಶತಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ನಾಗ, ಶ್ರೀ ರಕ್ತೇಶ್ವರಿ, ಶ್ರೀ ಪಂಜುರ್ಲಿ ಹಾಗೂ ಶ್ರೀ ಕಲ್ಕುಡ, ಕಲ್ಲುರ್ಟಿ, ತೂಕತ್ತರಿ ದೈವಗಳ ಪ್ರತಿಷ್ಠೆ ನಡೆಯಲಿದೆ.ಬೆಳಗ್ಗೆ 10:30 ರಿಂದ 108 ಕಲಶ ಸಹಿತ ಸಾನಿಧ್ಯ ಕಲಶೋತ್ಸವ, ಮಹಾಪೂಜೆ, ಮಹಾ ಪ್ರಾರ್ಥನೆ, ಪ್ರಸಾದ ವಿತರಣೆ, 11:30 ಕ್ಕೆ ನೇಮೋತ್ಸವದ ಪ್ರಯುಕ್ತ ಚಪ್ಪರಾರೋಹಣ ಹಾಗೂ ಸಂಜೆ 4:00ಯಿಂದ ಭಂಡಾರ ಇಳಿಯಲಿದೆ. ಸಂಜೆ 6 ಗಂಟೆಯಿಂದ ಶ್ರೀ ವಿಠಲ ನಾಯಕ ಕಲ್ಲಡ್ಕ ಇವರಿಂದ ‘ಗೀತಾ ಸಾಹಿತ್ಯ’ ಹಾಗೂ 7:30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8.30 ರಿಂದ ಶ್ರೀ ಪಂಜುರ್ಲಿ, ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ, ಶ್ರೀ ತೂಕತ್ತರಿ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ. ಸತ್ಕರ್ಮಗಳು ಎಲ್ಲೂರು ಸೀಮೆಯ ಆಗಮ ಪಂಡಿತ ಬ್ರಹ್ಮಶ್ರೀ ಕುತ್ತಾರು ಕೇಂಜ ಶ್ರೀ ಶ್ರೀಧರ ತಂತ್ರಿಗಳು ಹಾಗೂ ಋತ್ವಿಜರ ನೇತೃತ್ವದಲ್ಲಿ ಪೂರ್ವಿಕ ಸಂಪ್ರದಾಯದಂತೆ ಯಥಾಯೋಗ್ಯವಾಗಿ ಸಂಪನ್ನಗೊಳ್ಳಲಿದ್ದು ಈ ಶುಭ ಕಾರ್ಯಕ್ರಮಕ್ಕೆ ಭಕ್ತಾದಿಗಳು ಸಕಾಲದಲ್ಲಿ ಆಗಮಿಸಿ ತನು ಮನ ಧನಗಳಿಂದ ಸಹಕರಿಸಿ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ಮತ್ತು ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆಹ್ವಾನ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page