
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸುದ್ದಿಗಾರರೊಂದಿಗೆ ಮಾತನಾಡಿ ಮಹಿಳೆಯರಿಗೆ ಪ್ರತಿ ತಿಂಗಳೂ 2 ಸಾವಿರ ರೂ. ಪಾವತಿಸುವ ‘ಗೃಹ ಲಕ್ಷ್ಮೀ’ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರವಾಗಿದೆ. ಬಾಕಿ ಇರುವ 2 ತಿಂಗಳ ಹಣ ಒಂದೇ ಸಲ ಖಾತೆಗೆ ಜಮೆ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಸಹ ಒಮ್ಮೆಲೇ ಹಣ ಪಾವತಿಯಾಗಲಿದೆ ಎಂದರು.













