ಬಿ.ವಿ. ಕಾರಂತರ ಜನ್ಮದಿನಾಚಾರಣೆ ಪ್ರಯುಕ್ತ ”ಗಜಮುಖದವಗೆ ಗಣಪಗೆ ”

ಆಧುನಿಕ ಭಾರತೀಯ ರಂಗಭೂಮಿಗೆ ಹೊಸ ಜೀವಚೈತನ್ಯ ನೀಡಿದ ಮಹಾನ್ ಪ್ರತಿಭೆ ದಿವಂಗತ ಶ್ರೀ ಬಿ.ವಿ. ಕಾರಂತ ಅವರ ಜನ್ಮದಿನದಂದು ಯಕ್ಷರಂಗಾಯಣ, ಕಾರ್ಕಳ ವತಿಯಿಂದ ದಿನಾಂಕ 19, ಸೆಪ್ಟೆಂಬರ್ 2024 ಗುರುವಾರ ಸಂಜೆ 4.00 ಗಂಟೆಗೆ ”ಗಜಮುಖದವಗೆ ಗಣಪಗೆ ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕೋಟಿ ಚೆನ್ನಯ ಥೀಮ್ ಪಾರ್ಕ್ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಕಾವ್ಯಶ್ರೀ ಅಜೇರು ಅವರು ಯಕ್ಷಗಾನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಿದ್ದಾರೆ. ಶ್ರೀ ನಿತ್ಯಾನಂದ ಪೈ ಅವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.













