
ಕ್ರಿಸ್ತ ರಾಯ ಚರ್ಚ್ ಸಭಾ ಮಂದಿರದಲ್ಲಿ ಫೆಬ್ರವರಿ 16 ಆದಿತ್ಯವಾರ ಚುನಾವಣೆ ಅಧಿಕಾರಿ ಕೇಂದ್ರೀಯ ನಿಕಟಪೂರ್ವ ಅಧ್ಯಕ್ಷೆ ಮೇರಿ ಡಿ’ಸೋಜ ಹಾಗೂ ವೀಕ್ಷಕರಾಗಿ ಕೇಂದ್ರೀಯ ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಡಿಸ್ ನವ ಹುದ್ದೆದಾರರ ಚುನಾವಣೆಯಲ್ಲಿ ಎರಡನೇ ಬಾರಿಗೆ ನೂತನ ಅಧ್ಯಕ್ಷರಾಗಿ ವಿಲ್ಸನ್ ಮಸ್ಕರೇನ್ಹಾಸ್, ಕೇರಾ.
ನಿಕಟ ಪೂರ್ವ ಅಧ್ಯಕ್ಷರಾಗಿ ಜೋನ್ ಟೆಲ್ಲಿಸ್, ಅಜೆಕಾರ್. ನಿಯೋಜಿತ ಅಧ್ಯಕ್ಷೆಯಾಗಿ ಒಲಿವಿಯಾ ಡಿ’ಮೆಲ್ಲೊ. ಉಪಾಧ್ಯಕ್ಷೆಯಾಗಿ ಒಫಿಲೀಯ ಡಿ’ಸೋಜ, ಪರಪ್ಪಾಡಿ, ಕಾರ್ಯಾದರ್ಶಿಯಾಗಿ ಆಂಟನಿ ಮಿರಾಂಡಾ ಕಣಜಾರ್, ಸಹ ಕಾರ್ಯದರ್ಶಿ ಶ್ರೀಮತಿ ಲವೀನಾ ಡಿ’ಸೋಜ ನಕ್ರೆ,ಕೋಶಾಧಿಕಾರಿಯಾಗಿ ಪ್ರತೀಮಾ ಡಿ’ಸೋಜ ಹೀರ್ಗಾನ , ಸಹ ಕಜಾಂಜಿ ಕು.ಪ್ರೀಯಾ ಕ್ವಾಡ್ರಸ್ ಕಣಜಾರ್, ಆಮ್ಚೊ ಸಂದೇಶ್ ಪತ್ರಿಕೆ ಪ್ರತಿನಿಧಿ ಶ್ರೀಮತಿ ಸೋನು ಸಿಕ್ವೇರಾ ಮಿಯಾರು, ರಾಜಕೀಯ ಸಂಚಾಲಕರಾಗಿ ಸೊಲೊಮನ್ ಆಲ್ವಾರಿಸ್ ಕಾರ್ಕಳ ಟೌನ್, ಸರಕಾರಿ ಸವಲತ್ತು ಸಂಚಾಲಕ ಡೇನಿಸ್ ವಾಜ್ ಅತ್ತೂರು, ಸ್ರೀ ಸಶಕ್ತಿಕರಣ ಗ್ರೇಸಿ ಕೊಯೆಲ್ಲೊ ಅತ್ತೂರು, ಅಂತರಿಕ ತಪಾಸಣೆ ಆಂಟೊನಿ ಲೋಬೊ ಅಜೆಕಾರು,
ಈ ಎಲ್ಲಾ ಮುಖ್ಯ ಹುದ್ದೆದಾರರು ಆರಿಸಿ ಬಂದಿರುತ್ತಾರೆ.
ಸಭೆಯಲ್ಲಿ 9ಘಟಕದ 76 ಸದಸ್ಯರಿದ್ದರು. ವಲಯ ಆತ್ಮೀಕ ಗುರುಗಳಾದ ಅತೀ ವಂದನೀಯ ಫಾದರ್ ಆಲ್ಬನ್ ಡಿ’ಸೋಜ ಚುನಾಯಿತರಿಗೆ ಶುಭ ಕೊರಿದರು



















