
ಉಡುಪಿ: ತುಳುಕೂಟ ಉಡುಪಿ ರಿ. ಇದರ ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ಆಯ್ಕೆಯಾಗಿದ್ದಾರೆ.
ಪತ್ರಕರ್ತ ಜನಾರ್ದನ್ ಕೊಡವೂರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಸಮಿತಿಯ ಗೌರವ ಸಲಹೆಗಾರರಾಗಿ ಉಡುಪಿ ವಿಶ್ವನಾಥ್ ಶೆಣೈ, ಗೌರವಾಧ್ಯಕ್ಷರಾಗಿ ಭಾಸ್ಕರನಂದ ಕುಮಾರ್, ಉಪಾಧ್ಯಕ್ಷರಾಗಿ ಭುವನ ಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶುಭ ಶೆಟ್ಟಿ, ವಿ.ಕೆ ಯಾದವ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರು, ಜೊತೆ ಕಾರ್ಯದರ್ಶಿಗಳಾಗಿ ಜ್ಯೋತಿ ದೇವಾಡಿಗ ಸಂತೋಷ್ ಕುಮಾರ್ ಮೋಹನ್ ಶೆಟ್ಟಿ ಕೋಶಾಧಿಕಾರಿಯಾಗಿ ಚೈತನ್ಯ ಎಂ ಜಿ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಮನೋಹರ್ ಶೆಟ್ಟಿ ತೋನ್ಸೆ, ಉದಯ ಕುಮಾರ್ ತೆಂಕನಡಿಯೂರು ಮತ್ತು ಶಿಲ್ಪ ಜೋಷಿ ಆಯ್ಕೆಯಾದರು.













