ಹಲವು ವಿಭಾಗದಲ್ಲಿ, ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ವಿದ್ಯಾರ್ಥಿಗಳ ಸಾಧನೆ

ಆಳ್ವಾಸ್ ಕಾಲೇಜ್ ಮೂಡಬಿದ್ರೆ ಇಲ್ಲಿ HCL company ಯವರು ಆಯೋಜಿಸಿದ ರಾಜ್ಯಮಟ್ಟದ ‘Sports for Change 2025″ ಇದರಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ನಿಧಿ ಶಾಟ್ ಪುಟ್ ಪ್ರಥಮ ಸ್ಥಾನ, ಶ್ರೇಯಾ ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ, ನಾಗಶ್ರೀ ಕ್ಯಾರಂ ದ್ವಿತೀಯ ಸ್ಥಾನ, ಯಶೋದ ಚೆಸ್ ಹಾಗೂ ಟೇಬಲ್ ಟೆನಿಸ್ ದ್ವಿತೀಯ ಸ್ಥಾನ, ಧನುಷ್ ಪೂಜಾರಿ ಶೆಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ, ಧನುಷ್ ಟೇಬಲ್ ಟೆನಿಸ್ ಪ್ರಥಮ ಸ್ಥಾನ, ಅಭಿನವ್ ಟೇಬಲ್ ಟೆನಿಸ್ ದ್ವಿತೀಯ ಸ್ಥಾನ, ಸೃಜನ್ 800 ಮೀಟರ್ ಓಟ ದ್ವಿತೀಯ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಯಿ ಶೆಟ್ಟಿ ಶಾಟ್ ಪುಟ್ ತೃತೀಯ ಸ್ಥಾನ ಪಡೆದಿರುತ್ತಾನೆ.