58.52 ಲಕ್ಷ ರೂ ನಿವ್ವಳ ಲಾಭ, ಕಳೆದ ವರ್ಷಕ್ಕಿಂತ ಶೇಕಡ 86% ಏರಿಕೆ

2024-25 ನೇ ಸಾಲಿನಲ್ಲಿ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 101 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಸಂಘವು 18.77 ಕೋಟಿ ರೂ ಠೇವಣಿ ಮತ್ತು 17.95 ಕೋಟಿ ರೂ ಸಾಲ ವಿತರಿಸಿ, 36.72 ವ್ಯವಹಾರವನ್ನು ಮಾಡಿ 58.52 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ.
ಈ ನಿವ್ವಳ ಲಾಭವು ಕಳೆದ ಸಾಲಿಗಿಂತ ಶೇಕಡ 86% ಏರಿಕೆಯಾಗಿದ್ದು ಆರ್ಥಿಕ ವರ್ಷಾಂತ್ಯಕ್ಕೆ 2,895 ಸದಸ್ಯರಿಂದ 60.95 ಲಕ್ಷ ಷೇರು ಬಂಡವಾಳ ಹೊಂದಿದೆ.
ಸಂಘ ಒಟ್ಟು 19.81 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು ವರದಿ ವರ್ಷದಲ್ಲಿ ಬಜಗೊಳಿಯಲ್ಲಿ ತನ್ನ ಎರಡನೇ ಶಾಖೆಯನ್ನು ತೆರೆದಿರುತ್ತದೆ. ಮತ್ತು ಸದ್ಯದಲ್ಲೇ ಬೆಳ್ಮಣ್ಣಲ್ಲಿ ತಮ್ಮ ಮೂರನೇ ಶಾಖೆಯನ್ನು ತೆರೆಯುವುದಾಗಿ ಸಂಘದ ಅಧ್ಯಕ್ಷರಾದ ಶ್ರೀಯುತ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.













