ಹೆತ್ತವರನ್ನು ಭೇಟಿ ಮಾಡಿ,1 ಲಕ್ಷ ರೂ. ಧನ ಸಹಾಯ ನೀಡಿದ ಕಾರ್ಕಳ ಬಂಟರ ಸಂಘದ ಸಂಚಾಲಕರಾದ ವಿಜಯ ಶೆಟ್ಟಿ

ಮತಾಂಧರಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಕಾರ್ಕಳ ಬಂಟರ ಸಂಘದ ಪ್ರಮುಖರು ಭೇಟಿ ನೀಡಿದರು .ಕಾರ್ಕಳ-ಹೆಬ್ರಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕರಾದ ವಿಜಯ್ ಶೆಟ್ಟಿಯವರು ತಮ್ಮ ವೈಯುಕ್ತಿಕ
1 ಲಕ್ಷ ರೂಪಾಯಿ ಸಹಾಯಧನವನ್ನು ಸುಹಾಸ್ ಹೆತ್ತವರಿಗೆ ನೀಡಿ ಸಂತಾಪ ಸೂಚಿಸಿದರು .
ಈ ಸಂದರ್ಭದಲ್ಲಿ ಸೂರ್ಯಕಾಂತ್ ಶೆಟ್ಟಿ , ಹಿತೇಶ್ ಶೆಟ್ಟಿ , ವಿಖ್ಯಾತ್ ಶೆಟ್ಟಿ , ಸುಹಾಸ್ ಶೆಟ್ಟಿ , ದೇವೇಂದ್ರ ಶೆಟ್ಟಿ , ರಾಕೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .













