ಕ್ರೈಸ್ಟ್ ಕಿಂಗ್ ಪ್ರೌಢಶಾಲಾ ವಿದ್ಯಾರ್ಥಿಗಳ ಸಂಶೋಧನಾ ವರದಿಗೆ ಬಹುಮಾನ

ಕಾರ್ಕಳ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ
ಆಳ್ವಾಸ್ ಶಿಕ್ಷಣ ಸಂಸ್ಥಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ದ್ವೆ ವಾರ್ಷಿಕ ಲೇಕ್ ಸಿಂಪೋಸಿಯಮ್ ೨೦೨೪” ಎಂಬ ಸಂಶೋಧನಾ
ಕಾರ್ಯಯೋಜನೆಗಳ ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಂಬತ್ತು ಮತ್ತು ಹತ್ತನೇ
ತರಗತಿ ವಿದ್ಯಾರ್ಥಿಗಳು ಮಂಡಿಸಿದ ಸಂಶೋಧನಾ ವರದಿಗೆ
ಬಹುಮಾನ ಲಭಿಸಿದೆ.
ಹತ್ತನೇ ತರಗತಿಯ ವಿದ್ಯಾರ್ಥಿಗಳಾದ
ಮೊಹಮ್ಮದ್ ಆರಿಝ್, ಬೇಸಿಲ್ ಹಾಗೂ ಕೀರ್ತನ್ ಡಿ’ಸೋಜ ಅವರು
ಮಂಡಿಸಿದ ಕಾರ್ಕಳದ ಆನೆಕೆರೆಯ ನೀರಿನ ವಿಶ್ಲೇಷಣೆಯ ವರದಿಗೆ
ಬಹುಮಾನ ಲಭಿಸಿದ್ದು ಅಲ್ಲದೆ ಒಂಬತ್ತನೇ ತರಗತಿಯ
ವಿದ್ಯಾರ್ಥಿಗಳಾದ ಲೆನಿಶಾ ಮೆಂಡೋನ್ಸಾ ಹಾಗೂ ಝುಬೇಧ ಅವರ
ಕಾರ್ಕಳದ ಸ್ಥಳಿಯ ಔಷಧೀಯ ಸಸ್ಯಗಳ ಸಂಶೋಧನಾ
ವರದಿಗೆ ಬಹುಮಾನ ಲಭಿಸಿದೆ.






























































































































