ಕಾರ್ಕಳದ ಸಾಣೂರು ಕ್ರಾಸ್ ನಲ್ಲಿ ಘಟನೆ

ಕಾರ್ಕಳ: ಸಾಣೂರು ರಾಮ ಮಂದಿರದ ಡಿವೈಡರ್ ಕ್ರಾಸಿನಲ್ಲಿ, ಮಾಜಿ ಸಚಿವ ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಬಸ್ಸಿನ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಾರು ಚಾಲಕ ಮತ್ತು ಅವರ ಆಪ್ತ ಸಹಾಯಕ ಗಾಯಗೊಂಡಿದ್ದಾರೆ.
ರಮಾನಾಥ್ ರೈ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ಮೂಡುಬಿದ್ರೆಯ ಹೆದ್ದಾರಿಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಎರಡು ವಾಹನಗಳ ಮುಂಭಾಗ ಜಖಂ ಗೊಂಡಿದೆ.






























































































































