ಗೋವಿಗಾಗಿ ಮೇವು – ಗೋಗ್ರಾಸಾ ಸೇವಾ ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ, ಬಾರಾಡಿ ಫ್ರೆಂಡ್ಸ್ ಅವರ ಸಹಭಾಗಿತ್ವದಲ್ಲಿ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಕಾರ್ಕಳ ಇವರ ಸಹಕಾರದೊಂದಿಗೆ ಇಂದು ಭಾನುವಾರ ಸೆಪ್ಟೆಂಬರ್ 20ರಂದು ಬೆಳಿಗ್ಗೆ 6:30ರಿಂದ 8:30ರವರೆಗೆ ಕಾರ್ಕಳದ ಮಂಗಲಪಾದೆಯಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಗೋಗ್ರಾಸ ಸೇವೆ ನಡೆಸಲಾಯಿತು.
ಸುಮಾರು ಒಂದು ಟಿಪ್ಪರ್ ಲೋಡ್ನಷ್ಟು ಹಸಿರು ಹುಲ್ಲನ್ನು 35ಕ್ಕೂ ಅಧಿಕ ಕಾರ್ಯಕರ್ತರು ಒಟ್ಟಾಗಿ ಕಟಾವು ಮಾಡಿ ಸಂಗ್ರಹಿಸಿದರು.
ಸಂಗ್ರಹಿಸಿದ ಹುಲ್ಲನ್ನು ಬ್ರಹ್ಮಾವರದ ಕಾಮಧೇನು ಗೋಶಾಲಾ ಮಹಾಸಂಘ(ರಿ.) ನಂಚಾರು, ಇಲ್ಲಿಗೆ ಸಾಗಿಸಿ ಹಸ್ತಾಂತರಿಸಲಾಯಿತು.
































































































































