24.9 C
Udupi
Friday, March 21, 2025
spot_img
spot_img
HomeBlog🔴ಕುಂದಾಪುರ:K.P.C.C ಸದಸ್ಯ ಸಹನಾ ಸಮೂಹ ಸಂಸ್ಥೆಗಳ ಮಾಲಕ ಸುರೇಂದ್ರ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ..!

🔴ಕುಂದಾಪುರ:K.P.C.C ಸದಸ್ಯ ಸಹನಾ ಸಮೂಹ ಸಂಸ್ಥೆಗಳ ಮಾಲಕ ಸುರೇಂದ್ರ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ..!

ಕಾರು ಜಖಂ: ಓರ್ವ ಬಂಧನ
ಇನ್ನೋರ್ವ ಪರಾರಿ

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಕಳೆದ 10 ವರ್ಷಗಳಿಂದ ಸಹನಾ ಸಮೂಹ ಸಂಸ್ಥೆಗಳನ್ನು ನಡೆಸುತ್ತಿರುವ ಸುರೇಂದ್ರ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿ, ಕಾರು ಜಖಂಗೊಳಿಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇನ್ನೋರ್ವ ಪರಾರಿಯಾದ ಘಟನೆ ಜು.7 ರಂದು ನಡೆದಿದೆ. ಎಸ್‌ಎಸ್‌ಎಸ್‌ ಟ್ರಾವೆಲ್ಸ್ ಎಂಬ ಸಂಸ್ಥೆಯ ಮಾಲೀಕ ಸತೀಶ ಶೆಟ್ಟಿ (53) ಬಂಧಿತ ಆರೋಪಿಯಾಗಿದ್ದು ಪುತ್ರ ಸನ್ನಿಧಿ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ.

ಏನಿದು ಘಟನೆ?

ಸಹನಾ ಸುರೇಂದ್ರ ಶೆಟ್ಟಿಯವರ ಪತ್ನಿಯವರ ಕುಂದಾಪುರ ನಗರದ ಎ.ಎಸ್ ಟ್ರೇಡರ್ ಎಂಬ ಕಟ್ಟಡದಲ್ಲಿ ಮಳೆ ನೀರಿನ ಕೆಲಸ ಮಾಡುತ್ತಿದ್ದು ಈ ಕೆಲಸದ ಬಗ್ಗೆ 1 ನೇ ಮಹಡಿಯಲ್ಲಿರುವ ಸತೀಶ ಶೆಟ್ಟಿ ಎಂಬಾತ ಅಸಮಧಾನ ಹೊಂದಿದ್ದು ಈ ವಿಚಾರವಾಗಿ ಸುರೇಂದ್ರ ಶೆಟ್ಟಿಯವರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದು ಜು.7 ರಂದು ಬೆಳಿಗ್ಗೆ ಕುಂದಾಪುರದ ಕೆ.ಎಸ್.ಆ‌ರ್.ಟಿ.ಸಿ ಡಿಪ್ಪೋ ಎದುರಿನ ಸರ್ವೀಸ್ ರಸ್ತೆಯಲ್ಲಿ ಸುರೇಂದ್ರ ಶೆಟ್ಟಿಯವರ ಕಾರಿಗೆ ತಮ್ಮ ಇನ್ನೋವಾ ಕಾರನ್ನು ಅಡ್ಡ ನಿಲ್ಲಿಸಿ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲು ಯತ್ನಿಸಿದ್ದು ಕಾರಿನ ಗ್ಲಾಸ್ ಹಾಗೂ ಬಾಗಿಲು ತೆಗೆಯದ್ದರಿಂದ ಕಾರಿನ ಡೋರಿಗೆ ಜಖಂ ಮಾಡಿದ್ದಲ್ಲದೆ ಪೋಲೀಸರಿಗೆ ದೂರು ನೀಡಿದ್ದಲ್ಲಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ಕುಂದಾಪುರ ಪೊಲೀಸರು ಆರೋಪಿ ಸತೀಶ್ ಶೆಟ್ಟಿಯನ್ನು ಬಂಧಿಸಿನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ ಸನ್ನಿಧಿ ಶೆಟ್ಟಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಸತೀಶ್‌ ಶೆಟ್ಟಿ ಮೇಲೆ ಈ ಹಿಂದೆಯೂ ವಂಚನೆ ಸಹಿತ ಇತರ ಪ್ರಕರಣಗಳ ಬಗ್ಗೆ ದೂರುಗಳಿರುವುದಾಗಿ ತಿಳಿದುಬಂದಿದೆ.ಇನ್ನು ದೂರು ನೀಡಿರುವ ಸುರೇಂದ್ರ ಶೆಟ್ಟಿಯವರು ಕಳೆದ ಹತ್ತು ವರ್ಷಗಳಿಂದ ಸಹನಾ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ. ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅವರು ಕೆಪಿಸಿಸಿ ಸದಸ್ಯರಾಗಿದ್ದಾರೆ. ಇನ್ನು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page