ಆರನೇ ವರ್ಷದ ವರ್ಧಂತಿ ಪ್ರಯುಕ್ತ ಗಗ್ಗರ ಸೇವೆ

ದಿನಾಂಕ 16.02.2025 ರಿಂದ 18-02-2025ರ ವರೆಗೆ ಕಾರ್ಕಳದ ಪುಲ್ಕೇರಿ ಇಂದಿರಾನಗರ ಕರಿಯ ಕಲುವಿನಲ್ಲಿ ಸಾರ್ವಜನಿಕ ಶ್ರೀ ಸತ್ಯಸಾರಾಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರದೈವಗಳ ಕ್ಷೇತ್ರ ಸಮಿತಿಯ ಆರನೇ ವರ್ಷದ ವರ್ಧಂತಿ ಪ್ರಯುಕ್ತ ಗಗ್ಗರ ಸೇವೆಯು ನಡೆಯಲಿದೆ.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಕೆ. ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ಈ ಸೇವೆಯು ನಡೆಯಲಿದ್ದು ದಿನಾಂಕ 16.2.2025ನೇ ರವಿವಾರ ಸಂಜೆ ಗಂಟೆ 7:15 ರಿಂದ ರಾತ್ರಿ 8 ಗಂಟೆಯವರೆಗೆ ಸಮಿತಿಯ ಸದಸ್ಯರು ಹಾಗೂ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 9:00 ಯಿಂದ ಅನ್ನ ಸಂತರ್ಪಣೆ ಹಾಗೂ 9:30 ರಿಂದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ “ಆತೆ ಪನೊಡಾತೆ” ಎಂಬ ನಾಟಕ ನಡೆಯಲಿದೆ.
ದಿನಾಂಕ 17.2.2025 ನೇ ಸೋಮವಾರದಂದು ಬೆಳಗ್ಗೆ 6:30 ರಿಂದ ದೈವಗಳ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾಹ, ದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ, ಗಣಹೋಮ, ತೋರಣ ಮುಹೂರ್ತ ನಡೆಯಲಿದ್ದು ಬೆಳಗ್ಗೆ 8:30 ರಿಂದ ನಾಗದೇವರಿಗೆ ತಾನು ಪಂಚಾಮೃತ ತಂಬಿಲ ಸೇವೆ ನಡೆಯಲಿದೆ. ಬಳಿಕ ನವಕ ಕಲಶ ಆರಾಧನೆ, ಪ್ರಧಾನ ಹೋಮ, ದೈವಗಳ ಕಲಶ ಅಭಿಷೇಕ, ಪರ್ವ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು ರಾತ್ರಿ 9:00 ಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
9:30ರಿಂದ ಸತ್ಯ ಸಾರಾಮಣಿ ಹಲೇರಾ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆಯ ನಂತರ ಒಂಟಿ ಗುಳಿಗ, ಚಾಮುಂಡಿ ಗುಳಿಗ ದೈವಗಳ ಗಗ್ಗರ ಸೇವೆ ನಡೆಯಲಿದೆ.
ದಿನಾಂಕ 18.02.2025ನೇ ಮಂಗಳವಾರದಂದು ರಾತ್ರಿ 9:00ಗೆ ಅನ್ನ ಸಂತರ್ಪಣೆ ನಡೆಯಲಿದ್ದು 9:30 ರಿಂದ ಮಂತ್ರ ದೇವತೆ ದೈವದ ಗಗ್ಗರ ಸೇವೆ ಹಾಗೂ ಮಹಂಕಾಳಿ ದೈವದ ಗಗ್ಗರ ಸೇವೆ ನಡೆಯಲಿದೆ.



















