
ಕಾರ್ಕಳ, ಫೆ. 14: ಆನ್‌ಲೈನ್ ವಂಚನೆ, ಹಣಕಾಸು ವಂಚನೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಹೊರ ಜಿಲ್ಲೆ ಮತ್ತು ರಾಜ್ಯದ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದ ಘಟನೆ ಸಂಭವಿಸಿದೆ.
ಕಾರ್ಕಳ ಖಾಸಗಿ ಕಾಲೇಜಿನ ಪೃಥ್ವಿಶ್ ಪೈ ನನ್ನು ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗ ಸೈಬರ್ ಕೈಂ ವಿಭಾಗದ ಪೊಲೀಸರು ಆಗಮಿಸಿ ಯುವಕನನ್ನು ವಿಚಾರಣೆಗೊಳಪಡಿಸಿ, ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಹಣಕಾಸು ವಂಚನೆ ಸಂಬಂಧಿಸಿ ಮುಂಬಯಿ ಪೊಲೀಸರು ಪೆರ್ವಾಜೆ ನಿವಾಸಿ ಸಮರ್ಥ್ ಶೆಟ್ಟಿ(25)ನನ್ನು ವಶಕ್ಕೆ ಪಡೆದು ಮುಂಬಯಿಗೆ ಕರೆದೊಯ್ದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.



















