
ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು , ಗಣರಾಜ್ಯೋತ್ಸವದ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಪ್ರಥಮ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಗೈಡ್ ಕಮಿಷನರ್ ಹಾಗೂ ಏಷ್ಯಾ ಪೆಸಿಪಿಕ್ ವರ್ಲ್ಡ್ ಲೀಡರ್ ಶಿಪ್ ಅವಾರ್ಡ್ ವಿಜೇತೆ ಶ್ರೀಮತಿ ಜ್ಯೋತಿ . ಜೆ. ಪೈ ಯವರು ನಡೆಸಿಕೊಟ್ಟರು. ಪ್ರಜಾ ಪ್ರಭುತ್ವ ದಿನದ ಶುಭಾಶಯಗಳು ಹಾರೈಸಿದರು ಮುಖ್ಯ ಶಿಕ್ಷಕರಾದ ಶಿವಣ್ಣ ಹೆಗ್ಡೆಯವರು ಪುರ ಮೆರವಣಿಗೆಗೆ ಚಾಲನೆಯನ್ನು ನೀಡಿದರು.

ನಂತರ ನಡೆದ ಸಭಾ ಕಾರ್ಯಕ್ರಮವು ಶಿವಣ್ಣ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಗಳಾಗಿ ಶ್ರೀಮತಿ ಸರೋಜಾ ಹೆಗ್ಡೆ, ದುರ್ಗಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜಕಡಂಬ ವೇದಿಕೆಯಲ್ಲಿ ಉಪಸ್ಥಿತರಿದ್ದು ಎಲ್ಲರನ್ನೂ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರು ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು. ಸಹ ಶಿಕ್ಷಕಿ ರುಮೈ ಝಾರವರು ಬಹುಮಾನ ವಿತರಣ ಕಾರ್ಯಕ್ರಮ ನಡೆಸಿಕೊಟ್ಟರು. ಕೊನೆಯಲ್ಲಿ ಸಹ ಶಿಕ್ಷಕಿ ಅನಿತಾ ರವರು ಧನ್ಯವಾದ ನೀಡಿ, ಸಹ ಶಿಕ್ಷಕಿ ವೀಣಾ ರವರು ಕಾರ್ಯಕ್ರಮ ಸಂಯೋಜನೆ ಮಾಡಿದರು. ಜಗದೀಶ್ ಹೆಗಡೆಯವರು ವತಿಯಿಂದ ಬಹುಮಾನ ಹಾಗೂ ಶಿವಣ್ಣ ಹೆಗಡೆಯವರ ವತಿಯಿಂದ ಸಿಹಿತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.





















