
ಕಾರ್ಕಳ ಆನೆಕೆರೆಯ ಬಳಿ ಸ್ಕೂಟರ್ ಮತ್ತು ಬಸ್ ನಡುವೆ ಅಪಘಾತದಲ್ಲಿ, ಸ್ಕೂಟರ್ ಸವಾರ ಮೃತಪಟ್ಟ ಘಟನೆ ಜ. 26ರ ಮಧ್ಯಾಹ್ನ ಸಂಭವಿಸಿದೆ.
ಖಾಸಗಿ ಬಸ್ ಬೈಪಾಸ್ ನಿಂದ ಕಾರ್ಕಳದ ಕಡೆ ತೆರಳುತ್ತಿದ್ದು, ಎದುರು ಕಡೆ ಬರುತ್ತಿರುವ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಸವಾರ ಅಜಮತುಲ್ಲಾ(5೦) ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಸ್ ಚಾಲಕನ ಅತಿ ವೇಗದ , ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















