
ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಪೋಷಕರ ಸಭೆ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ವಹಿಸಿದ್ದರು ಪ್ರತಿ ವರ್ಷವೂ ಶಾಲೆಗೆ ದಾಖಲಾತಿ ಹೊಂದಿದ ವಿದ್ಯಾರ್ಥಿಗಳಿಗೆ ಠೇವಣಿ ರೂಪಾಯಿ ಒಂದು ಸಾವಿರವನ್ನು ನಿವೃತ್ತ ಶಿಕ್ಷಕ ರಾಷ್ಟ್ರ ಪ್ರಶಸ್ತಿ ವಿಜೇತ ನಾಗಭೂಷಣ ಜೋಶಿ ಇವರು ನೀಡುತ್ತಾ ಬಂದಿರುತ್ತಾರೆ ಕಾರ್ಯಕ್ರಮದಲ್ಲಿ ಹೊಸದಾಗಿ ಶಾಲೆಗೆ ದಾಖಲಾತಿ ಹೊಂದಿದ 19 ವಿದ್ಯಾರ್ಥಿಗಳಿಗೆ ಇಂದು ಅತಿಥಿ ಅಭ್ಯಾಗತರ ಮೂಲಕ ನೀಡಲಾಯಿತು.
ಈ ಠೇವಣಿಯನ್ನು ವಿದ್ಯಾರ್ಥಿಗಳು 7ನೇ ತರಗತಿ ಮುಗಿಸಿದ ನಂತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶೋಭಾ ನಡೆಸಿ ಶಿಕ್ಷಕಿ ಜ್ಯೋತಿ ಧನ್ಯವಾದ ನೀಡಿದರು ಸ್ವಾಗತವನ್ನು ಶಿಕ್ಷಕಿ ರಕ್ಷಿತಾ ಮಾಡಿದರು ಪೋಷಕರು ಆಡಳಿತ ಮಂಡಳಿಯ ಸದಸ್ಯರು ಸಂಚಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.