
ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಕಾರ್ಕಳ, ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರರ ಸಂಘ ಉಡುಪಿ ಜಿಲ್ಲೆ, ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ಛತ್ರಪತಿ ಫೌಂಡೇಶನ್ ರಿ. ಇವರ ಸಹಯೋಗದಲ್ಲಿ ಇಂದು ಕಾರ್ಕಳ ವಿಜೇತ ವಿಶೇಷ ಶಾಲೆಯಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2024 ವಿಜೃಂಭಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ತ್ರೋಬಾಲ್ ಪಂದ್ಯಾಟಕ್ಕೆ ಬಹುಮಾನದ ಪ್ರಾಯೋಜಕತ್ವ ವನ್ನು ನೀಡಿದ ಬಂಟ್ಸ್ ಸಂಘ ಮುಂಬೈ ಜತೆ ಕಾರ್ಯದರ್ಶಿ ಹಾಗೂ ಉದ್ಯಮಿಗಳು ಗಿರೀಶ್ ಶೆಟ್ಟಿ ತೆಳ್ಳಾರ್, ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿಗಳಾದ ಶ್ರೀಮತಿ ರತ್ನಾ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರ್ಕಳ ಶಾಖೆಯ ಮ್ಯಾನೇಜರ್ ಸಚಿನ್, ಪೋರ್ಸ್ ಮೋಟಾರ್ಸ್ ಕಾರ್ಕಳದ ಸೇವಾ ವ್ಯವಸ್ಥಾಪಕರಾದ ರಂಜಿತ್ ಹೆಚ್ ಪಿ, ಅರ್ಚನಾ ಟ್ರಸ್ಟ್ ರಿ. ಮಣಿಪಾಲ ಅಧ್ಯಕ್ಷರಾದ ಜಯ ವಿಠ್ಠಲ್, ಪಾಲಕರ ಸಂಘದ ಕಾರ್ಯದರ್ಶಿ ಲ.ಸಾಧನಾ ಕಿಣಿ, ಅಮ್ಮನ ನೆರವು ಟ್ರಸ್ಟ್ ನ ಸ್ಥಾಪಕಧ್ಯಕ್ಷರು ಅವಿನಾಶ್ ಶೆಟ್ಟಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷರಾದ ಆಗ್ನೇಸ್ ಕುಂದರ್, ರಾಜ್ಯಾಧ್ಯಕ್ಷರಾದ ಡಾ.ಕಾಂತಿ ಹರೀಶ್, ಜಿಲ್ಲಾಧ್ಯಕ್ಷರಾದ ರವೀಂದ್ರ ಹೆಚ್, ಶ್ರೀ ದುರ್ಗಾ ವಿದ್ಯಾ ಸಂಘ ಅಧ್ಯಕ್ಷರಾದ ಶ್ರೀ ಕೆ.ರಾಧಾಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು
ವಿಜೇತ ವಿಶೇಷ ಶಾಲಾ ಅಧ್ಯಕ್ಷರಾದ ರತ್ನಾಕರ್ ಅಮೀನ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಉಡುಪಿ ಜಿಲ್ಲೆಯ ಸುಮಾರು 15 ವಿಶೇಷ ಶಾಲೆಗಳು ತ್ರೋಬಾಲ್ ಪಂದ್ಯಾಟ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಆಶಾ ನಿಲಯ ವಿಶೇಷ ಶಾಲೆ ಉಡುಪಿ ಪ್ರಥಮ ಸ್ಥಾನ, ವಿಜೇತ ವಿಶೇಷ ಶಾಲೆ ಕಾರ್ಕಳ ದ್ವಿತೀಯ ಸ್ಥಾನ, ಮಾನಸ ಪಾಂಬೂರ್ ತೃತೀಯ ಸ್ಥಾನ ವನ್ನು ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು . ಶ್ರೀಮತಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ, ಡಾ.ಕಾಂತಿ ಹರೀಶ್ ಸ್ವಾಗತಿಸಿ, ರವೀಂದ್ರ ಹೆಚ್ ವಂದಿಸಿದರು. ಗಗನ್ ಶೆಟ್ಟಿ ಇವರು ಕ್ರೀಡಾ ಕೂಟದ ಕಾರ್ಯಕ್ರಮವನ್ನು ನಿರೂಸಿದರು.
































































































































