
ವಿಜೇತ ವಸತಿಯುತ ವಿಶೇಷ ಶಾಲೆ & ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ ರಿ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಗೌರವಾನ್ವಿತ ಹಿರಿಯ ಸಿವಿಲ್ & ಎ ಸಿ ಜೆ ಎಂ ನ್ಯಾಯಾಧೀಶರಾದ ಶರ್ಮಿಳಾ ಸಿ ಎಸ್ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ನ್ಯಾಯವಾದಿಗಳ ಸಂಘ ರಿ. ಉಪಾಧ್ಯಕ್ಷರಾದ ಕೆ.ಹರೀಶ್ ಅಧಿಕಾರಿ, ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿಗಳಾದ ಶುಭಾ, ಉದ್ಯಮಿಗಳಾದ ಶ್ರೀಧರ್ ಭಂಡಾರಿ ಇನ್ನಾ, ಉಪಸ್ಥಿತರಿದ್ದರು.
ಶ್ರೀಧರ್ ಭಂಡಾರಿ ಇನ್ನಾ ಇವರು ವಿಜೇತ ವಿಶೇಷ ಶಾಲೆಗೆ ಮಾಡಿದ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು

ಮಂಗಳೂರು ವಿಶ್ವ ವಿದ್ಯಾಲಯದ ವತಿಯಿಂದ ಉಡುಪಿ ಅಜ್ಜರಕಾಡು ಸ್ಟೇಡಿಯಂ ನಲ್ಲಿ ನಡೆದ ಕ್ರೀಡಾ ಕೂಟದ ವಿಜೇತರಿಗೆ ಸಿವಿಲ್ ನ್ಯಾಯಾದೀಶರು ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.ಸಭಾಧ್ಯಕ್ಷತೆಯನ್ನು ಶಾಲಾ ಸ್ಥಾಪಕರು ಡಾ ಕಾಂತಿ ಹರೀಶ್ ಅವರು ವಹಿಸಿದ್ದು, ಶಿಕ್ಷಕರು ಮತ್ತು ಶಿಕ್ಷಕೇತರು ಹಾಗೂ ಮುಗ್ಧ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ, ಡಾ ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಸುಪ್ರೀತಾ ವಂದಿಸಿದರು.



















