
ಕಾರ್ಕಳ: ಸಾವಿತ್ರಿ ಮನೋಹರರ ಜನ್ಮ ದಿನದ
ವಜ್ರಮಹೋತ್ಸವದ ವಿಜೃಂಭಣೆ ಬೆಳಗ್ಗೆ ಪುರೋಹಿತರಾದ ಶ್ರೀ ಸತೀಶ ಭಟ್ಟರ ನೇತೃತ್ವದಲ್ಲಿ ,ಹೋಮ ಹವನಾದಿಗಳೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮಗಳು ಸ್ವಾತಿ ಶರ್ಮ ಮತ್ತು
ಮಗ ಕಮಾಂಡರ್ ಅಶ್ವಿನ್ ಎಂ. ರಾವ್ ಹಮ್ಮಿ ಕೊಂಡಿದ್ದರು. ಬಂಧು ಬಾಂಧವರಿಂದ ಕಿಕ್ಕಿರಿದ ಮನೆಯ ಅಂಗಳ ನೂರಾರು ಆಮಂತ್ರಿತ ಶುಭ ಹಾರೈಕೆಗೆ ಸಾಕ್ಷಿಯಾಯಿತು.
ಸಾವಿತ್ರಿಯವರ ತವರು ಮನೆಯವರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಮಂತ್ರಿತರಿಂದ ಪ್ರಶಂಸೆಗೆ ಪಾತ್ರವಾಯಿತು. ವಿಶೇಷ ಅತಿಥಿಗಳಾಗಿ ಬೆಂಗಳೂರಿನಿಂದ ಆಗಮಿಸಿದ ಭಾರತ್ ಸೈಟ್ ಗೈಡ್ ಸಂಘಟನಾ ಆಯುಕ್ತ ಪ್ರಭಾಕರ ಭಟ್ ಮತ್ತು ಉಡುಪಿ ಜಿಲ್ಲಾ ಗೈಡ್ ಆಯುಕ್ತ ಶ್ರೀಮತಿ ಜ್ಯೋತಿ ಪೈ ಕಾರ್ಯಕ್ರಮ ಕಂಡು ಮೂಕವಿಸ್ಮಿತರಾದರು. ಶ್ರೀಮತಿ ಸಾವಿತ್ರಿಗೆ ಕಿರೀಟ ತೊಡಿಸಿದರೆ ಮನೋಹರ ರಾಯರಿಗೆ ಪೇಟ ತೊಡಿಸಿ, ಹಾರ ಬದಲಾಯಿಸಿ ಮನೆಯವರು ಸಂಭ್ರಮಿಸಿದರು.
ಇತ್ತೀಚೆಗೆ ತಮ್ಮ ಸಾಮಾಜಿಕ ಸೇವೆಗಾಗಿ ಮಾನವ ಅಭಿವೃದ್ಧಿ ಇಲಾಖೆ ಮೂಲಕ ಅಮೇರಿಕಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹೆಮ್ಮೆಯ ಸಹೋದರ ಹಂದಿಗೋಡು ರಾಮಚಂದ್ರಯ್ಯನವರನ್ನು ಶ್ರೀಮತಿ ಸಾವಿತ್ರಿ ದಂಪತಿಗಳು ಸನ್ಮಾನಿಸಿದರು.
ವಜ್ರಮಹೋತ್ಸವ ಅಂಗವಾಗಿ 20 ಜನ ಸುಮಂಗಲಿಯರಿಗೆ ಸೀರೆ ಬಾಗೀನ ಇತ್ತು ಗೌರವಿಸಲಾಯಿತು. ಪೂಜಾ ಕಾರ್ಯಕ್ರಮಗಳ ನಂತರ ಪುರೋಹಿತರಾದ ಶ್ರೀ ಸತೀಶ್ ಭಟ್ ಮತ್ತು ಪಾಕಶಾಸ್ತ್ರ ಪ್ರವೀಣ ನಾಗಭೂಷಣ ಹೆಬ್ಬಾರರನ್ನು ಮನೋಹರ ದಂಪತಿಗಳು ಸನ್ಮಾನಿಸಿದರು. ಮಧ್ಯಾಹ್ನ ಸಂಗ್ರಾಸ ಭೋಜನವಿತ್ತು ಸಂತೋಷಪಡಲಾಯಿತು.