
ಬೆಂಗಳೂರು: ಶಬ್ಧ ಮಾಲಿನ್ಯ ಹಾಗೂ ಇತರ ವಾಹನ ಸವಾರರಿಗೆ ಉಂಟಾಗುವ ಗೊಂದಲವನ್ನು ತಡೆಯುವ ಉದ್ದೇಶದಿಂದ ವಿಐಪಿಗಳ ಸಂಚಾರದ ವೇಳೆ ವಾಹನಗಳು ಸೈರನ್ ಬಳಕೆ ನಿಷೇಧಿಸಿ ಡಿಜಿ ಅಂಡ್ ಐಜಿಪಿ ಸಲೀಂ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ವಿಐಪಿ ವಾಹನಗಳ ಸೈರನ್ ಬಳಕೆಯಿಂದ ಗಣ್ಯ ವ್ಯಕ್ತಿಗಳ ಓಡಾಟದ ಮಾಹಿತಿ ಲಭ್ಯವಾಗುತ್ತದೆ. ಆದರೆ ಇದರಿಂದ ಶಬ್ಧ ಮಾಲಿನ್ಯ ಹಾಗೂ ಇತರ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ. ಹೀಗಾಗಿ ವಿಐಪಿ ಸಂಚಾರದ ವೇಳೆ ವೈರ್‌ಲೆಸ್ ಕಮ್ಯುನಿಕೇಷನ್ ಪರಿಣಾಮಕಾರಿಯಾಗಿ ಬಳಸುವಂತೆ ಸೂಚಿಸಿದ್ದು, ಅಂಬುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ತಿಳಿಸಿದ್ದಾರೆ.






























































































































