ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆಯಲ್ಲಿ “ವಿಶ್ವ ವೈದ್ಯರ ದಿನಾಚರಣೆ”
ದಿ

ಜು.1 ರಂದು “ಅಂತರಾಷ್ಟ್ರೀಯ ವಿಶ್ವ ವೈದ್ಯ”ರ ದಿನಾಚರಣೆಯನ್ನು ವರ್ಧಮಾನ ಪೂರ್ವ ಪ್ರಾಥಮಿಕ ಶಾಲೆಯ ಯುಕೆಜಿ “ಬನ್ನಿಸ್” ತಂಡದ ಮಕ್ಕಳು ಟಿ.ಎಂ.ಎ. ಪೈ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ವೈದ್ಯರುಗಳಿಗೆ ಮಕ್ಕಳು ತನ್ನ ಅಂಗೈ ಅಚ್ಚು ಶುಭಾಶಯ ಪತ್ರಗಳನ್ನು ನೀಡಿ ಶುಭಾಶಯವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರುಗಳಾದ ಡಾ. ಸಂಜಯ್ ಕುಮಾರ್, ಡಾ. ಆನಂದ ನಾಯಕ್, ಡಾ. ಆಶಾ ಪಿ ಹೆಗ್ಡೆ, ಡಾ. ಸೂರಜ್ ರಾವ್, ಡಾ. ಮೃಣಾಲ್ ಕುಮಾರ್, ಡಾ. ಸುನಿಲ್ ಬಾಳಿಗ, ಡಾ. ದೀಪಿಕಾ ಕಾಮತ್, ಡಾ. ಪುನೀತ್ ಹೆಗ್ಡೆ, ಡಾ. ಮಂಜು, ಡಾ. ಅನುಷಾ ಡಿಸೋಜ, ಡಾ. ಫ್ರಾಂಕ್ಲಿನ್ , ನಟೇಶ್ ಹಾಗೂ ಅನುಷಾ ಪ್ರಭು ಉಪಸ್ಥಿತರಿದ್ದು ಮಕ್ಕಳಿಗೆ ಬರೆಯುವ ಸಾಧನಗಳ ಕಿಟ್ ಗಳನ್ನು ವಿತರಿಸಿದರು.

ಶಾಲಾ ಸಂಚಾಲಕಿ ಶಶಿಕಲಾ.ಕೆ. ಹೆಗ್ಡೆ “ವೈದ್ಯೋ ನಾರಾಯಣ ಹರಿ” ಭಗವಂತ ಎಲ್ಲಾ ಕಡೆ ಇರಲು ಸಾಧ್ಯವಿಲ್ಲ, ಅದಕ್ಕಾಗಿ ವೈದ್ಯರನ್ನು ಸೃಷ್ಟಿಸಿದ್ದಾನೆ ಎಂದು ವೈದ್ಯರ ದಿನಾಚರಣೆಯ ಶುಭವನ್ನು ಕೋರಿದರು. ಶಾಲಾ ಆಡಳಿತ ಅಧಿಕಾರಿ ಕರ್ತವ್ಯ ಜೈನ್ ವಂದಿಸಿದರು. ಶಾಲಾ ಶಿಕ್ಷಕಿಯರಾದ ಸ್ಮಿತಾ, ಶೋಭಾ ಶೆಟ್ಟಿ ಹಾಗೂ ಗ್ರೀಷ್ಮ ಕಾಮತ್ ಉಪಸ್ಥಿತರಿದ್ದರು.