ಯಾವ ಸಮುದಾಯದ ಓಲೈಕೆಗಾಗಿ, ಪೆಟ್ರೋಲ್ ಡೀಸೆಲ್ ದರ ಏರಿಕೆ?: ಹರೀಶ್ ಪೂಂಜಾ ಆಕ್ರೋಶ

ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ದರವನ್ನು ಏರಿಸುವಂತೆ ಸರಕಾರ ಆದೇಶ ನೀಡಿದ್ದು ಇದರ ವಿರುದ್ಧ ಬಿಜೆಪಿ ಸರಕಾರ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸುತ್ತಿದೆ.
ತೆಂಗಿನಕಾಯಿ ಗೆರೆಟಿ ,ಚೆಂಬು, ಪ್ಲೇ ಕಾರ್ಡ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಹರೀಶ್ ಪೂಂಜಾ” ಸರಕಾರಕ್ಕೆ ಅಭಿವೃದ್ಧಿ ಮಾಡುವ ಚಿಂತನೆ ಇಲ್ಲ. ಅನುದಾನ ಬಿಡುಗಡೆ ಮಾಡಲು ಸರಕಾರದ ಬಳಿ ಹಣವಿಲ್ಲ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಅನುದಾನ ಕೊಡಿ ಎಂದು ಕೇಳಿದರೆ ಸರಕಾರ ಸ್ಪಂದಿಸಲಿಲ್ಲ. ಆದರೆ ಮುಸ್ಲಿಮರಿಗೆ 10,000 ಕೋಟಿ ಅನುದಾನ ಕೊಟ್ಟಿದ್ದಾರೆ. ಇದೀಗ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿದ್ದು ಬಕ್ರಿದ್ ಹಬ್ಬದ ಸಲುವಾಗಿ ಮುಸ್ಲಿಮರಿಗೆ ಕೊಡುವುದಕ್ಕಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.