
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಕೆಎಸ್&ಡಿಎಲ್ ಈಗ ದೇಶದ ದುಬಾರಿ ಸೋಪ್ ತಯಾರಿಕೆ ಪ್ಲ್ಯಾನ್ ರೂಪಿಸಿದ್ದು ಈ ಸೋಪನ್ನು ನಕಲು ಮಾಡುವವರಿಗೆ ಚಾಟಿಯೇಟು ಬೀಸಲು ನಯಾ ಯೋಜನೆಯಾಗಿ ಇನ್ನು ಮುಂದೆ ಈ ಸೋಪ್ಗಳಿಗೆ ಕ್ಯೂಆರ್ ಕೋಡ್ ಜಾರಿಯಾಗಲಿದೆ.
ಈಗ ಕೆಎಸ್&ಡಿಎಲ್ ಭಾರತದಲ್ಲಿಯೇ ದುಬಾರಿ ಸೋಪ್ ತಯಾರಿಕೆಯ ಪ್ಲ್ಯಾನ್ ರೂಪಿಸಿದ್ದು, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಶ್ರೀಗಂಧದ ಎಣ್ಣೆಯನ್ನು ಹೆಚ್ಚು ಬಳಸಿ ಉತ್ಕೃಷ್ಟ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಗೆ ಬರಲಿದ್ದು ಸದ್ಯ ವಿದೇಶಕ್ಕೆ ಕಳಿಸುವ ಉದ್ದೇಶದಿಂದ ಈ ಪ್ಲ್ಯಾನ್ ಮಾಡಲಾಗುತ್ತಿದೆ.
ಹೊರರಾಜ್ಯದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನಕಲು ಮಾಡಿ ಮಾರಾಟ ಮಾಡುವ ವ್ಯವಸ್ಥಿತ ಜಾಲವೂ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಹದಿನೈದು ದಿನದಲ್ಲಿ ಸೋಪ್‌ಗಳಿಗೆ ವಿಶೇಷವಾಗಿ ಕ್ಯೂಆರ್ ಕೋಡ್ ಜಾರಿಯಾಗಲಿದೆ. ನಕಲಿ, ಅಸಲಿ ಪ್ರಾಡೆಕ್ಟ್‌ಗಳ ವಿವರ ಇದರಿಂದ ತಿಳಿಯಬಹುದಾಗಿದೆ.



















