ಮುನಿಯಾಲು ಬಂಟರ ಸಂಘ ಅಧ್ಯಕ್ಷ ಸತೀಶ್ ಶೆಟ್ಟಿ ಸಂತಾಪ

ಮುನಿಯಾಲು ಬಂಟರ ಸಂಘದ ಸಕ್ರೀಯ ಸದಸ್ಯ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ಎಂಬ ಯುವಕ ಮಂಡ್ಯದ ನಾಗಮಂಗಲದಲ್ಲಿ ಕಬಡ್ಡಿ ಕ್ರೀಡೆ ಆಡುತ್ತಿರುವಾಗ ಹೃದಯಾಘಾತವಾಗಿ ನಮ್ಮೆಲ್ಲರನ್ನು ಅಗಲಿರುತ್ತಾನೆ ಎಂದು ತಿಳಿಸಲು ವಿಷಾದಪಡಿಸುತ್ತೇವೆ.
ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೂ, ಬಂಧುಗಳಿಗೂ, ಅಭಿಮಾನಿ ಬಳಗಕ್ಕೂ, ಬಂಟರ ಸಂಘದ ಸರ್ವ ಸದಸ್ಯರಿಗೂ ಭಗವಂತ ನೀಡಲೆಂದು ಮುನಿಯಾಲು ಬಂಟರ ಸಂಘದ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ.
ದಿನಾಂಕ : ಡಿಸೆಂಬರ್ 15 ರ ಆದಿತ್ಯವಾರ ಪ್ರೀತಮ್ ಶೆಟ್ಟಿಯವರ ಪಾರ್ಥಿವ ಶರೀರ ಮುಟ್ಟುಪಾಡಿಗೆ ತಲುಪುತ್ತಿದ್ದು, ಅವರ ಅಂತಿಮ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಿ ಅವರ ಆತ್ಮಕ್ಕೆ ಚಿರಶಾಂತಿಯ ಕೋರುವ ಸಲುವಾಗಿ ನಾಳೆ ನಡೆಯಬೇಕಾಗಿದ್ದ ಮುನಿಯಾಲು ಬಂಟರ ಸಂಘದ ಸಮಾವೇಶದ ಸಂಪೂರ್ಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುತ್ತೇವೆ ಎಂದು ಮುನಿಯಾಲು ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ ತಿಳಿಸಿದ್ದಾರೆ